ಇಂದಿನಿಂದ ಹಕ್ಕಿಗೊಂದು ಗುಟುಕು ಅಭಿಯಾನ

19spt1
ಕಳೆದ ಸಾಲಿನಲ್ಲಿ ಹಕ್ಕಿಗೊಂದು ಗುಟುಕು ಅಭಿಯಾನದ ಸ್ಪರ್ಧೆಯಲ್ಲಿ ಭಾಗವಹಿಸಿದ ಚಿತ್ರ.
Published on

ಸೋಮವಾರಪೇಟೆ: ನಾವು ಪ್ರತಿಷ್ಠಾನ ಕೊಡಗು ವತಿಯಿಂದ ಮಕ್ಕಳಲ್ಲಿ ಮತ್ತು ಜನರಲ್ಲಿ ಪರಸರ ಅರಿವು ಮೂಡಿಸುವ ನಿಟ್ಟಿನಿಂದ ಹಕ್ಕಿಗೊಂದು ಗುಟುಕು ಅಭಿಯಾನ ಮಾ.20 ಇಂದಿನಿಂದ ಪ್ರಾರಂಭವಾಗಲಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಪರೀತ ಬಿಸಿಲಿನಿಂದ ಕೆರೆ ಕೊಳ್ಳಗಳು ಬತ್ತುತ್ತಿದ್ದು, ಪಕ್ಷಿಗಳಿಗೆ ಕುಡಿಯಲು ನೀರು ಸಿಗದಂತಹ ಪರಿಸ್ಥಿಯೂ ಇದೆ. ಈ ಸಂದರ್ಭದಲ್ಲಿ ಪ್ರತಿ ಮನೆಗಳ ತಾರಸಿ ಅಥವಾ ಅಂಗಳದಲ್ಲಿ ಪಾತ್ರೆಯಲ್ಲಿ ನೀರು ಇಟ್ಟರೆ ಬಾಯಾರಿಕೆ ಆದಾಗ ಪಕ್ಷಿಗಳು ಕುಡಿಯುತ್ತವೆ. ಇಂತಹ ಅಭಿಯಾನವನ್ನು ಕಳೆದ ಮೂರು ವರ್ಷಗಳಿಂದ ನಡೆಸುತ್ತಿತ್ತು. ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಾ.20 ರಂದು ವಿಶ್ವ ಗುಬ್ಬಿ ದಿನವಾಗಿದ್ದು, ಇಂದಿನಿಂದಲೇ ಹಕ್ಕಿಗೊಂದು ಗುಟುಕು ಅಭಿಯಾನ ಪ್ರಾರಂಭವಾಗಿ, ಏ.22 ರಂದು ಮುಕ್ತಾಯವಾಗಲಿದೆ.

ಮಕ್ಕಳು ಸಾರ್ವಜನಿಕರು ಪಕ್ಷಿಗಳಿಗೆ ನೀರು ಇಟ್ಟ ಸೆಲ್ಫಿ ಫೋಟೋವನ್ನು ಮೊ. ಸಂಖ್ಯೆ: 9880050881 ಗೆ ಕಳುಹಿಸಿದರೆ ಆಯ್ದ ಚಿತ್ರಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು. ಸ್ಪರ್ಧೆ ದಿನಾಂಕದ ನಂತರವೂ ಬೇಸಿಗೆ ಮುಗಿಯುವವರೆಗೆ ಹಕ್ಕಿಗೊಂದು ಗುಟುಕು ಅಭಿಯಾನ ಮುಂದುವರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net