ಸಂಘದ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ

17sor2
ಸೊರಬದ ತ್ಯಾವಗೋಡು ಗ್ರಾಮದಲ್ಲಿ ಶಿಮುಲ್ ನಿರ್ದೇಶಕ ದಯಾನಂದ ಗೌಡ ಅವರನ್ನು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸನ್ಮಾನಿಸಲಾಯಿತು. ಕನಕದಾಸ, ಶೇಖರಪ್ಪ, ಮಲ್ಲಿಕಾರ್ಜುನ ಗೌಡ ಇತರರಿದ್ದರು.
Published on

ಸೊರಬ: ಗ್ರಾಮೀಣ ಭಾಗದ ಹಾಲು ಉತ್ಪಾದಕರ ಸಹಕಾರ ಸಂಘದ ಬೆಳವಣಿಗೆಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಶಿಮುಲ್ ನಿರ್ದೇಶಕ ದಯಾನಂದ ಗೌಡ ಹೇಳಿದರು.

ತಾಲೂಕಿನ ತ್ಯಾವಗೋಡು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರೈತರ ಬದುಕಿಗೆ ಹೈನುಗಾರಿಕೆ ಮುಖ್ಯ. ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಘಗಳು ಬೆಳೆಯಬೇಕು ಎಂದರು.
ಸಂಘಕ್ಕೆ ಅಗತ್ಯವಿರುವ ಯಂತ್ರ, ಪುಸ್ತಕ, ಕಟ್ಟಡಗಳ ನಿರ್ಮಾಣಕ್ಕೆ ಬೇಕಾಗುವ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ನಮ್ಮ ಕುಟುಂಬದ ನಿವೇಶನವನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಉಚಿತವಾಗಿ ನೀಡಲಾಗುವುದು. ಚುನಾವಣೆಯಲ್ಲಿ ಪಕ್ಷಾತೀತವಾಗಿ ಬೆಂಬಲ ಸಿಕ್ಕಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಕನಕದಾಸ, ಮಲ್ಲಿಕಾರ್ಜುನ ಗೌಡ, ಜಗದೀಶ್ ಗೌಡ, ನಾಗೇಶ್, ಸುರೇಶ್, ಗಣಪತಿ, ಶಶಿಕುಮಾರ್, ಶೇಖರಪ್ಪ, ಗುರುವಯ್ಯ, ವಿರೂಪಾಕ್ಷ ಗೌಡ, ಟೋಕಪ್ಪ, ಚಂದ್ರಪ್ಪ, ಸುರೇಶ್, ಶಿವಾನಂದ, ಕೆರಿಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net