

ಬೆಂಗಳೂರು: ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಜೆಡಿಎಸ್ನತ್ತ ಕಾಲಿಟ್ಟ ಸಿ.ಎಂ.ಇಬ್ರಾಹಿಂ ಅವರನ್ನ ಸೋಮವಾರ ವಿಧಾನಸೌಧದ ಕ್ಯಾಂಟೀನ್ ಬಳಿ ಮಾತನಾಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಏಯ್ 31ಕ್ಕೆ ಮನೆಗೆ ಬರ್ತೀನಿ ಎಂದು ಹೇಳಿಲ್ವಾ? ಸುಮ್ಮನಿರು ಆತುರ ಬಿದ್ದು ನಿರ್ಧಾರ ತಗೋಬೇಡ. ಬೇರೆ ಯೋಚನೆ ಮಾಡ್ಬೇಡ ಎಂದರು.
ಸಿದ್ದರಾಮಯ್ಯ: ಏಯ್ 31ರಂದು ಮನೆಗೆ ಬರ್ತೀನಿ ಸುಮ್ಮನಿರು
ಇಬ್ರಾಹಿಂ: ಯಾವಾಗ ಹೇಳಿದ್ರಿ ನೀವು?
ಸಿದ್ದರಾಮಯ್ಯ: ಬಾಷಾಗೆ ಹೇಳಿದ್ದೆ. ಮನೆಗೆ ಬರ್ತೀನಿ ಅಂತಾ ಹೇಳಿದ್ದೀನಿ ಇರೋ
ಇಬ್ರಾಹಿಂ: ನೀವು ಎಲ್ಲಿ ಹೇಳಿದ್ರಿ?
ಸಿದ್ದರಾಮಯ್ಯ: ಲೇ ಇರೋ.. ಆತುರ ಮಾಡ್ಬೇಡ, ಸುಮ್ಮನಿರು.. ಹೇಳ್ದಷ್ಟು ಕೇಳು.. ಎನ್ನುತ್ತಲೇ ಹೆಜ್ಜೆ ಹಾಕಿದರು.