ಆಯುಧಪೂಜೆ ಹಬ್ಬದ ರಾತ್ರಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ! ಬೆಚ್ಚಿಬಿದ್ದ ಸ್ಥಳೀಯರು

murder
Published on

ಶಿವಮೊಗ್ಗ: ಆಯುಧಪೂಜೆ ಹಬ್ಬದ ರಾತ್ರಿಯೇ ಶಿವಮೊಗ್ಗದ ಬಾಪೂಜಿ ನಗರದಲ್ಲಿ‌ ನೆತ್ತರು ಹರಿದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಶಿವಮೊಗ್ಗದ ಕಾರು ಶೋ ರೂಮ್‌ನಲ್ಲಿ‌ ಕೆಲಸ ಮಾಡುತ್ತಿದ್ದ ಸಂತೋಷ್ ಎಂಬಾತನ್ನು ಆಯುಧಪೂಜೆಯ ಮಧ್ಯರಾತ್ರಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ‌ಲ್ಲಿ ವಾಸವಿದ್ದ 30 ವರ್ಷ ವಯಸ್ಸಿನ ಸಂತೋಷ್​, ಗುರುವಾರ ರಾತ್ರಿ ಪರಿಚಯಸ್ಥರ ಮನೆಗೆ ಊಟಕ್ಕೆಂದು ಹೋಗಿದ್ದ‌.

ಈ ವೇಳೆ ಬಾಪೂಜಿ ನಗರದಲ್ಲಿ ಸಂತೋಷ್ ಮೇಲೆ ಮಾರಕಾಸ್ತ್ರಗಳಿಂದ ಆರೇಳು ಜನರ ತಂಡ ಹಲ್ಲೆ ಮಾಡಿ ಪರಾರಿಯಾಗಿದೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಂತೋಷ್​ ಮೃತಪಟ್ಟಿದ್ದಾನೆ. ಸಂತೋಷ್‌ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net