ಗಂಡನನ್ನು ಬಿಟ್ಟು ಬಾ... ಹಾಸನ ಯುವಕನ ಕಾಟಕ್ಕೆ ಶಿವಮೊಗ್ಗದ ವಿವಾಹಿತೆ ಕಂಗಾಲು!

cheating fraud
ಸಾಂದರ್ಭಿಕ ಚಿತ್ರ
Published on

ಶಿವಮೊಗ್ಗ: ಮದ್ವೆಗೂ ಮುನ್ನ ಯುವಕನೊಬ್ಬನ ಜೊತೆ ಸಲುಗೆಯಿಂದ ಇದ್ದದ್ದೇ ಆಕೆ ಬಾಳಿಗೆ ಮುಳುವಾಗಿದೆ. ಬೇರೊಬ್ಬನ ಜತೆ ಮದ್ವೆ ಆಗಿ ಸುಖ ಸಂಸಾರ ನಡೆಸುತ್ತಿದ್ದಾಕೆಗೆ ಇದೀಗ ಆ ಯುವಕ ಬ್ಲ್ಯಾಕ್​ ಮೇಲ್​ ಮಾಡುತ್ತಾ ಕೈ ಹಿಡಿದ ಗಂಡನನ್ನು ಬಿಟ್ಟು ನನ್ನೊಂದಿಗೆ ಬಾ ಎಂದು ಹಿಂಸಿಸಿದ್ದಾನೆ. ರೋಸಿ ಹೋದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಶಿವಮೊಗ್ಗದ ಯುವತಿಗೆ ಐದು ವರ್ಷದ ಹಿಂದೆ ತನ್ನ ತಾಯಿಯ ಮೂಲಕ ಹಾಸನ ತಾಲೂಕು ಕೆಳವತ್ತಿಯ ಗಿರೀಶ್ ಎಂಬುವನ ಪರಿಚಯವಾಗಿತ್ತು. ಇಬ್ಬರ ನಡುವೆ ಆತ್ಮೀಯತೆ ಉಂಟಾಗಿ ಅದು ಸಲುಗೆಗೆ ತಿರುಗಿತ್ತು. ಪರಸ್ಪರ ಫೋಟೋ ವಿನಿಮಯ ಮಾಡಿಕೊಳ್ಳುವ ಹಂತಕ್ಕೂ ಹೋಗಿತ್ತು. 7 ತಿಂಗಳ ಹಿಂದೆ ಈ ಯುವತಿ ಬೇರೆಯವರನ್ನು ವಿವಾಹವಾಗಿದ್ದಾರೆ. ತನ್ನನ್ನು ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ಗಿರೀಶ್, ಆಕೆಗೆ ಕರೆ ಮಾಡಿ ಜೀವಬೆದರಿಕೆ ಹಾಕಿದ್ದಾನೆ. ಕೂಡಲೇ ಗಂಡನ್ನು ತೊರೆದು ಹಾಸನಕ್ಕೆ ಬರಬೇಕು. ಇಲ್ಲವಾದರೆ ನಾವಿಬ್ಬರೂ ಜತೆಗಿರುವ ಫೋಟೋಗಳನ್ನು ನಿನ್ನ ಗಂಡ ಮತ್ತು ಸಂಬಂಧಿಕರಿಗೆ ಕಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಸಲುಗೆಯಿಂದ ಇದ್ದುದ್ದನ್ನೇ ತಪ್ಪಾಗಿ ಭಾವಿಸಿದ ಯುವಕ, ನಾನು ಬೇರೆಯವರನ್ನು ಮದುವೆಯಾಗಿದ್ದಕ್ಕೆ ಕುಪಿತಗೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಮಾನಸಿಕವಾಗಿ ಹಿಂಸಿಸುತ್ತಿದ್ದಾನೆ ಎಂದು ಆಘಾತಕ್ಕೊಳಗಾದ ಯುವತಿ ದೊಡ್ಡಪೇಟೆ ಠಾಣೆಗೆ ಗಿರೀಶ್ ವಿರುದ್ಧ ದೂರು ನೀಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net