ತುಮಕೂರಲ್ಲಿ ಶಿಕ್ಷಣ ಸಚಿವ ನಾಗೇಶ್​ರ ಮನೆಗೆ ಬೆಂಕಿ ಹಚ್ಚಲು ಯತ್ನ: ತುರ್ತು ಸುದ್ದಿಗೋಷ್ಠಿ ನಡೆಸಿದ ಗೃಹಸಚಿವ

bc nagesh
Published on

ತುಮಕೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು, ತಿಪಟೂರು ನಗರದಲ್ಲಿರುವ ಶಿಕ್ಷಣ ಸಚಿವ ನಾಗೇಶ್​ರ ಮನೆಗೆ NSUI ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ಬುಧಾವರ ಮಧ್ಯಾಹ್ನ ಹಲವರು ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಕುರಿತು ತುರ್ತುಗೋಷ್ಠಿ ನಡೆಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕಾಂಗ್ರೆಸ್​ನ ಕೆಲ ಕಾರ್ಯಕರ್ತರು ನಾಗೇಶ್​ರ ಮನೆಗೆ ನುಗ್ಗಿದ್ದಾರೆ. ಅಷ್ಟೇ ಅಲ್ಲ ನನಗೆ ಬಂದ ಮಾಹಿತಿ ಪ್ರಕಾರ ಅವರು ನಾಗೇಶ್​ರ ಮನೆಗೆ ಬೆಂಕಿ ಹಾಕಲು ಮುಂದಾಗಿದ್ದರು ಎಂದರು.

ಈಗಾಗಲೇ 15 ಜನರರು ಮತ್ತು 2 ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ಗುಂಡಾ ವರ್ತನೆ ನಮ್ಮಲ್ಲಿ ನಡೆಯಲ್ಲ. ಬೆಂಗಳೂರಿಂದ ಐವರು, ದಾವಣಗೆರೆಯಿಂದ ಮೂವರು, ಹಾಸನದಿಂದ ಒಬ್ಬರು, ತುಮಕೂರಿನಿಂದ ಒಬ್ಬರು‌ ಎಸ್​ಎಸ್​ಯುಐ ಮುಖಂಡರು ಪ್ರೀ ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಅವರಿಗೆಲ್ಲ ಈಗ ಪೊಲೀಸರು ಕಾನೂನಿನ ಪಾಠ ಮಾಡ್ತಾರೆ. ಇದು ಕಾಂಗ್ರೆಸ್ ಮುಖಂಡರ ಕೈವಾಡ. ದಾವಣಗೆರೆಯ ಎನ್​​ಎಸ್​ಯುಐ ಉಪಾಧ್ಯಕ್ಷ ಫೈಲ್ವಾನ್ ಅಲಿ ರೆಹಮಾನ್ ಎಂಬಾತ ಬಂದಿದ್ದಾನೆ. ಮೊದಲೇ ಸಂಚು ರೂಪಿಸಿಕೊಂಡು ಬಂದಿದ್ದಾರೆ. ಯಾರೆಲ್ಲಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಅವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net