

ಶಿವಮೊಗ್ಗ: ತಾಲೂಕಿನ ಆಯನೂರು ಸಮೀಪದ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಚನ್ನಹಳ್ಳಿಯ ಮೆಕ್ಕೆಜೋಳದ ಹೊಲದಲ್ಲಿ ಭಾನುವಾರ ಎರಡು ಕಾಡಾನೆಗಳು ಮೃತಪಟ್ಟಿವೆ.
ಅರಣ್ಯದಂಚಿನ ಭಾಗದಲ್ಲಿ ರೈತರು ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದು, ಮೆಕ್ಕೆಜೋಳ ಹೊಲಕ್ಕೆ ಬಂದ ಕಾಡಾನೆಗಳಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
20 ಮತ್ತು 22 ವರ್ಷದ ಗಂಡು ಆನೆಗಳು ಮೃತಪಟ್ಟಿವೆ. ಕಾಡು ಹಂದಿ ಭೇಟೆಯಾಡಲು ವಿದ್ಯುತ್ ತಂತಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಜಮೀನಿನ ಮಾಲೀಕ ಚಂದ್ರ ನಾಯ್ಕ್ ಎಂಬುವರು ತಲೆಮರೆಸಿಕೊಂಡಿದ್ದಾರೆ.