

ವಿಜಯಪುರ: ಕುರಿಗಳನ್ನು ಕದಿಯಲು ಬಂದಿದ್ದ ಕಳ್ಳರ ಕಾರು ಪಲ್ಟಿಯಾದ ಘಟನೆ ತಾಳಿಕೋಟೆ ತಾಲೂಕಿನ ಮೂಕರ್ತಿಹಾಳ ಗ್ರಾಮದ ಬಳಿ ಸಂಭವಿಸಿದೆ.
ಮೂಕರ್ತಿಹಾಳ ಗ್ರಾಮದಲ್ಲಿ ಕುರಿಗಳನ್ನು ಕದಿಯಲು ಕಾರು ಸಮೇತ ಆಗಮಿಸಿದ್ದ ಕಳ್ಳರು ಕುರಿಗಳನ್ನು ಕದ್ದು ಕಾರಿನಲ್ಲಿ ತುಂಬಿಕೊಂಡಿದ್ದರು. ಇದನ್ನು ನೋಡಿದ ಕುರಿಗಾಹಿ ಚೀರಾಡುತ್ತಿದ್ದಂತೆ ಕುರಿಗಳನ್ನು ಅಲ್ಲೇ ಬಿಟ್ಟು ಕಾರಿನಲ್ಲಿ ಎಸ್ಕೇಪ್ ಆದ ಕುರಿಗಳ್ಳರು ತಾಳಿಕೋಟೆಯತ್ತ ಹೋಗಿದ್ದರು.
ಡೋಣಿ ನದಿಯ ಸೇತುವೆ ಜಲಾವೃತವಾದ ಕಾರಣ ವಾಪಸ್ ಮೂಕರ್ತಿಹಾಳ ಗ್ರಾಮದತ್ತ ಕಾರಿನಲ್ಲಿ ಹಿಂತಿರುಗಿದ್ದರು. ಕಳ್ಳರು ಬಂದ ಸುದ್ದಿ ತಿಳಿಯುತ್ತಿದ್ದಂತೆ ಬಡಿಗೆ ಹಿಡಿದು ಜಮಾಯಿಸಿದ್ದ ಗ್ರಾಮಸ್ಥರನ್ನ ಕಂಡ ಕಳ್ಳರು ಭಯಗೊಂಡು ಪರಾರಿಯಾಗುವಾಗ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿದೆ. ಸ್ಥಳದಲ್ಲೇ ಕಾರನ್ನು ಬಿಟ್ಟು ಕಳ್ಳರು ಓಡಿಹೋಗಿದ್ದಾರೆ. ಕದ್ದಿದ್ದ ಕುರಿಗಳು ಕಾರಿನಲ್ಲೇ ಇದ್ದವು. ಇದು KA 03, AE 2627 ನಂಬರಿನ ಕಾರು. ಕಾರನ್ನೂ ಕಳ್ಳತನ ಮಾಡಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ.