ಕುಡಿದು ಗಾಡಿ ಓಡಿಸಿದವನ ಅವಾಂತರ: ಮೂಕ ಪ್ರಾಣಿಯ ಸಾವು

Car
Published on

ಬೀದರ್: ಇಲ್ಲೋರ್ವ ಚಾಲಕ ಕುಡಿದ ಮತ್ತಿನಲ್ಲಿ ಗಾಡಿ ಓಡಿಸಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಸ್ಥಳೀಯರಂತೂ ಸಿಕ್ಕಾಪಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾಲ್ಕಿ ಮುಖ್ಯರಸ್ತೆಯ ಕಲವಾಡಿ ಗ್ರಾಮದ ಬಳಿ ಘಟನೆ ನಡೆದಿದೆ. ಕುಡಿದು ಕಾರು ಓಡಿಸಿಕೊಂಡು ಬಂದವನು ಎರಡು ವಾಹನಗಳಿಗೆ ಗುದ್ದಿದ್ದಾನೆ. ನಂತರ ಸೀದಾ ಮನೆಯೊಳಗೆ ನುಗ್ಗಿಸಿದ್ದಾನೆ. ಇದರಿಂದಾಗಿ ಒಂದು ಎಮ್ಮೆ ಸಾವನ್ನಪ್ಪಿದೆ. ವಾಹನಗಳೂ ಸಹ ಸಂಪೂರ್ಣ ಜಖಂಗೊಂಡಿವೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡಿದು ಇಷ್ಟು ದೊಡ್ಡ ಅನಾಹುತ ಮಾಡಿದವನನ್ನು ಕೂಡಲೇ ಬಂಧಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net