ಶಾರುಖ್​ ಖಾನ್ ಮನೆ ಮುಂದೆ ಚಹಾ ಮಾರಲೂ ಬಿಡದ 'ಜವಾನ'; ಟೀ ರಸ್ತೆಗೆ ಚೆಲ್ಲಿದ ಭದ್ರತಾ ಸಿಬ್ಬಂದಿ

Sharukh Khan
Published on

ಮುಂಬೈ: ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಜವಾನ್​' ಬಿಡುಗಡೆ ಹಿನ್ನೆಲೆಯಲ್ಲಿ ಅವರ ಮುಂಬೈನ ನಿವಾಸದ ಮುಂದೆ ಅಭಿಮಾನಿಗಳು ನೆರೆದಿದ್ದು, ಇದೇ ವೇಳೆ ಅವರ ಮನೆಯ ಜವಾನ ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿದೆ.

ನಟ ಶಾರುಖ್​ ಖಾನ್​ನ ಮುಂಬೈ ನಿವಾಸ ಮನ್ನತ್​ನ ಎದುರುಗಡೆ ಚಾಯ್​ವಾಲ್​ನೊಬ್ಬನಿಗೆ ಭದ್ರತಾ ಸಿಬ್ಬಂದಿಯೊಬ್ಬ ಕಿರುಕುಳ ನೀಡಿದ ಪ್ರಸಂಗ ನಡೆದಿದೆ. ಈ ಮನೆ ಮುಂದೆ ಚಹಾ ಮಾರಬಾರದು ಎಂದು ಹೇಳಿದ ಆತ ಚಾಯ್​ವಾಲ್​ನ ಫ್ಲಾಸ್ಕ್ ಕಸಿದುಕೊಂಡು ಟೀಯನ್ನು ರಸ್ತೆಗೆ ಚೆಲ್ಲಿದ್ದಾನೆ.

ಬಡಪಾಯಿ ಚಾಯ್​ವಾಲಾನ ಜೀವನೋಪಾಯಕ್ಕೆ ಅಡ್ಡಿಪಡಿಸಿದ್ದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಶಾರುಖ್ ಮನೆಯ ಭದ್ರತಾ ಸಿಬ್ಬಂದಿ ಎನ್ನಲಾದ ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net