

ಬೆಂಗಳೂರು: ಚಲನಚಿತ್ರದ ನಟ-ನಟಿಯರು ತಮ್ಮ ವೃತ್ತಿ ಜೀವನದ ಜತೆಗೆ ಆಗಾಗ ಸಾಮಾಜಿಕ ವಿಚಾರಕ್ಕೆ ಸ್ಪಂದಿಸುವುದು ನಡೆಯುತ್ತಿರುತ್ತದೆ. ಅಂಥದ್ದೇ ಒಂದು ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ನಟಿ ಐಂದ್ರಿತಾ ರೇ, ಪ್ರಧಾನಿ ಮೋದಿಯ ಗಮನ ಸೆಳೆಯಲಿಕ್ಕೂ ಯತ್ನಿಸಿದ್ದಾರೆ.
ಕಳೆದ ರಾತ್ರಿ ಟ್ರಕ್ವೊಂದರಲ್ಲಿ ಗೋವಿನ ದೇಹದ ಭಾಗಗಳು ಕಂಡುಬಂದಿವೆ ಎಂದು ಹೇಳಿರುವ ನಟಿ, ಸದ್ಯ ಆ ಟ್ರಕ್ ಬೊಮ್ಮನಹಳ್ಳಿ ಪೊಲೀಸ್ ಠಾಣೆ ಬಳಿ ಇದೆ ಎಂದೂ ಮಾಹಿತಿ ನೀಡಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಗೋಮಾಂಸದ ತ್ಯಾಜ್ಯ ಇರುವ ಈ ಟ್ರಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ದಾಖಲು ಮಾಡಲು ಪೊಲೀಸರು ಹಿಂಜರಿಯುತ್ತಿದ್ದಾರೆ ಎಂದಿರುವ ಐಂದ್ರಿತಾ, ಬೆಂಗಳೂರು ಪೊಲೀಸರು, ಪೊಲೀಸ್ ಕಮಿಷನರ್ ಅವರಿಗೂ ಮೆನ್ಷನ್ ಮಾಡಿದ್ದಾರೆ. ಮಾತ್ರವಲ್ಲ, ಗೋಹತ್ಯೆ ಅಪರಾಧ ಎಂದಿರುವ ಐಂದ್ರಿತಾ, ಈ ಕುರಿತಂತೆ ಪ್ರಧಾನಿ ಮೋದಿಯವರ ಎಕ್ಸ್ ಹ್ಯಾಂಡಲ್ಗೂ ಮೆನ್ಷನ್ ಮಾಡಿ, ಗಮನ ಸೆಳೆಯಲು ಯತ್ನಿಸಿದ್ದಾರೆ.