VIDEO | ವಿದ್ಯಾರ್ಥಿಗಳೊಂದಿಗೆ ಹಿಂದಿ ಹಾಡಿಗೆ ನೃತ್ಯ ಮಾಡಿದ ಶಿಕ್ಷಕಿ; ಕೂಡಲೇ ಅಮಾನತು ಮಾಡುವಂತೆ ಒತ್ತಾಯಿಸಿದ ನೆಟ್ಟಿಗರು!

7410
Published on

ನವದೆಹಲಿ: ಹಿಂದೆಲ್ಲಾ ಶಾಲೆಯಲ್ಲಿ ಟೀಚರ್ ಎಂದರೆ ಎಲ್ಲಿಲ್ಲದ ಭಯ. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳ ಮನಸ್ಥಿಯೂ ಬದಲಾಗಿದೆ. ಅವಕಾಶ ಸಿಕ್ಕಾಗೆಲ್ಲಾ ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರ ನಡುವಿನ ಅಂತರ ಕಡಿಮೆಯಾಗಿದೆ. ಸದ್ಯದ ಇಂಟರ್ನೆಟ್ ಜಗತ್ತಿನಲ್ಲಿ ರೀಲ್ಸ್​ ಎಂಬುದು ಟ್ರೆಂಡ್. ಶಿಕ್ಷಕರು ಮತ್ತು ಮಕ್ಕಳು ಸೇರಿಕೊಂಡು ರೀಲ್ಸ್​ನಲ್ಲಿ ನರ್ತಿಸಿರುವ ವಿಡಿಯೋಗಳು ಈ ಹಿಂದೆಯೂ ಸಾಕಷ್ಟು ಬಾರಿ ವೈರಲ್ ಆಗಿತ್ತು. ಇದೀಗ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಎಂಟು ಜನ ವಿದ್ಯಾರ್ಥಿಗಳೊಂದಿಗೆ ಅನುಷ್ಕಾ ಚೌಧರಿ ಎಂಬ ಶಿಕ್ಷಕಿಯೊಬ್ಬಳು ಹಿಂದಿ ಹಾಡಿಗೆ ನೃತ್ಯ ಮಾಡಿದ್ದಾಳೆ. ಇದನ್ನು ವಿಡಿಯೋ ಮಾಡಿ ತನ್ನ ಇನ್ಸ್​ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, 3 ಲಕ್ಷದಷ್ಟು ಮಂದಿ ವೀಕ್ಷಿಸಿದ್ದಾರೆ. 

ಅನುಷ್ಕಾ ಚೌಧರಿ ತನ್ನ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನರು ಈಕೆಯ ನಡಯನ್ನು ಟೀಕಿಸಿದ್ದಾರೆ. ಶಿಕ್ಷಕಿಯಾದವಳು ಮಕ್ಕಳನ್ನು ಉತ್ತಮ ಮಾರ್ಗದಲ್ಲಿ ಕೊಂಡು ಹೋಗಬೇಕು. ಬದಲಾಗಿ ಅಸಭ್ಯ ಹಾಡುಗಳಿಗೆ ನೃತ್ಯ ಮಾಡುವಂತೆ ಪ್ರೋತ್ಸಾಹಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನೆಟ್ಟಿಗರು ಶಿಕ್ಷಕಿ ಅನುಷ್ಕಾ ಔಧರಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ತರಗತಿಯ ಶಿಸ್ತನ್ನು ಹಾಳು ಮಾಡಿರುವ ಶಿಕ್ಷಕಿಯನ್ನು ಅಮಾನುತು ಮಾಡುವುದು ಒಳಿತು ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net