ಸಂಘಟನೆಯಿಲ್ಲದೆ ಚದುರುತ್ತಿರೊ ಸಮುದಾಯ

gowdara vedike
ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗೌಡರ ವೇದಿಕೆ ಜಿಲ್ಲಾ ಟಕ ಉದ್ಘಾಟನಾ ಸಮಾರಂಭವನ್ನು ಸಂಸ್ಥಾಪಕ ಅಧ್ಯಕ್ಷ ಕೃಷ್ಣೇಗೌಡ ಉದ್ಘಾಟಿಸಿದರು. ಬಾಬು ಮೌನಿ, ಗೋಪಾಲಕೃಷ್ಣ, ಡಾ.ವೈ.ವಿ.ವೆಂಕಟಚಲಪತಿ, ರೇಣುಕಾ ಇದ್ದರು.
Published on

ಕೋಲಾರ: ಒಕ್ಕಲಿಗ ಸಮುದಾಯದಲ್ಲಿ ಸಂಘಟನೆಯ ಕೊರತೆಯಿರುವುದರಿಂದ ಚದುರಿ ಹೋಗಿದೆ. ಇದರಿಂದಾಗಿ ಸಮರ್ಪಕವಾಗಿ ಸೌಲಭ್ಯಗಳು ದೊರೆಯುತ್ತಿಲ್ಲ, ಇನ್ನಾದರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದಲ್ಲ ಎಂದು ಗೌಡರ ವೇದಿಕೆ ಸಂಸ್ಥಾಪಕ ಕೃಷ್ಣೇಗೌಡ ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗೌಡರ ವೇದಿಕೆ ಜಿಲ್ಲಾ ಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹೆಸರಿಗಷ್ಟೇ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ, ಆದರೆ ನಿಜವಾಗಿಯೂ ನಿಗಮದಿಂದ ಅರ್ಹರಿಗೆ ಸೌಲಭ್ಯಗಳು ಸಿಗುತ್ತಿಲ್ಲ ಎಂದು ದೂರಿದರು.

ಕೋಲಾರದಲ್ಲಿ ಉಚಿತವಾಗಿ ವಧು-&ವರರ ಅನ್ವೇಷಣೆ ಕೇಂದ್ರ ತೆರೆಯಲಾಗುವುದು. ಸರ್ಕಾರದ ಯೋಜನೆಗಳು ಕೆಲವರೇ ಅನುಭವಿಸುತ್ತಿದ್ದಾರೆ. ಇದನ್ನು ಪಡೆದುಕೊಳ್ಳಲು ಸಂಟನೆಯಾಗಬೇಕು. ವಿಧಾನಸೌಧ, ವಿಕಾಸಸೌಧ ಕಟ್ಟಿಸಿದವರು ಒಕ್ಕಲಿಗರು ಎಂಬುದನ್ನು ಸರ್ಕಾರ ಮರೆಯಬಾರದು ಎಂದು ತಿಳಿಸಿದರು.

ಏಪ್ರಿಲ್​ 11 ಮತ್ತು 12ರಂದು ಒಕ್ಕಲಿಗರ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ನಡೆಸಲು ಕ್ರಮವಹಿಸಿದ್ದು, ಇದರ ರೂಪರೇಷಗಳು ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಜಿಲ್ಲೆಯಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಒಕ್ಕಲಿಗ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ.ಕುಮಾರ್​ ಮಾತನಾಡಿ, ರಾಜ್ಯದಲ್ಲಿ ಒಕ್ಕಲಿಗರು ಸಂಕಷ್ಟದಲ್ಲಿದ್ದಾರೆ. ಜಾತಿ ಗಣತಿ ವೈಜ್ಞಾನಿಕವಾಗಿಲ್ಲ. ಜಾತಿಗಣತಿ ಬಿಡುಗಡೆ ಮಾಡಿ ಅದರಲ್ಲಿ ಒಕ್ಕಲಿಗರಿಗೆ ಅನ್ಯಾಯವಾದರೆ ಹೋರಾಟಕ್ಕೆ ಇಳಿಯಬೇಕು ಎಂದು ಹೇಳಿದರು.

ಗೌಡತಿಯರ ವೇದಿಕೆ ಅಧ್ಯೆ ರೇಣುಕಾ ಮಾತನಾಡಿ, ಸಮುದಾಯ ಬೆಳವಣಿಗೆ ವಿಚಾರದಲ್ಲಿ ರಾಜಕೀಯ ಬೆರಸಬಾರದು. ರಾಜ್ಯದ್ಯಂತ ಹೆಣ್ಣು ಮಕ್ಕಳು ಸಂಘಟನೆ ಮಾಡುತ್ತಿದ್ದೇವೆ. ವಧು&ವರರ ಸಮಸ್ಯೆ ರೈತರು ರೈತರಿಗೆ ಹೆಣ್ಣು ಕೊಡುತ್ತಿಲ್ಲ. ಇದರ ಬಗ್ಗೆ ಯಾರಾದರೂ ಗಮನ ಹರಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

* ಸ್ವಾಭಿಮಾನ ಬಿಡಬಾರದು

ಒಕ್ಕಲಿಗರು ಹೇಡಿಗಳಾಗಬಾರದು. ಕಾಲು ಎಳೆಯುವ ಕೆಲಸ ಮಾಡುವುದರಿಂದ ಒಕ್ಕಲಿಗರು ಬೆಳೆಯುತ್ತಿಲ್ಲ. ಮೊದಲು ಸಮಾನತೆಯ ಭಾವನೆ ಪ್ರತಿಯೊಬ್ಬರಲೂ ಮೂಡಬೇಕು ಎಂದು ಸಂಶೋಧಕಿ ಸುನಿತಾ ಸಲಹೆ ನೀಡಿದರು. ಶಾಸನಗಳ ಪ್ರಕಾರ ಕೆಂಪೇಗೌಡರು ಕೋಲಾರ ಜಿಲ್ಲೆಯವರು. ಇಲ್ಲಿನ ನಾಯಕತ್ವದ ಕೊರತೆಯಿದ್ದು, ಹೊರಗಿನವರನ್ನು ಬೆಳೆಸಲಾಗುತ್ತಿದೆ. ಯುವಕರನ್ನ ಬೆಳಸಬೇಕು. ಸಮುದಾಯದ ಸ್ವಾಭಿಮಾನ ಬಿಡಬಾರದು ಎಂದು ಎಚ್ಚರಿಸಿದರು.

* ಉಪಜಾತಿ ವಿಂಗಡಣೆಯಿಂದ ಚದರುತ್ತಿದೆ

ಒಕ್ಕಲಿಗ ಸಮುದಾಯದಲ್ಲಿ ಬಡವರು&ಶ್ರೀಮಂತರು ಇದ್ದಾರೆ. ಉಪ ಜಾತಿಗಳ ಹೆಸರಿನಲ್ಲಿ ಒಕ್ಕಲಿಗ ಸಮುದಾಯ ಚದುರುಹೋಗಿದೆ. ಒಗ್ಗಟ್ಟಾಗದಿದ್ದರೆ ಮುಂದೆ ಒಂದಾಗುವುದು ಕಷ್ಟ. ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ರಾಜ್ಯ ಮಾವು ಮಾರಾಟ ಮತ್ತು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ ಎಚ್ಚರಿಸಿದರು. ಮೊದಲು ನಮ್ಮ ಮನಸ್ಸುಗಳು ಶುದ್ದವಾಗಬೇಕು. ಕೆಂಪೇಗೌಡ ಜಯಂತಿ ಕೇವಲ ಆಚರಣೆಗೆ ಸೀಮಿತವಾಗಿದೆ. ಸಂಘಟನೆ ಆಗದಿರುವುದು ನಮ್ಮ ದುರಂತ. ಸಮುದಾಯಕ್ಕೆ ತೊಂದರೆಯಾದಾಗ ಒಂದಾಗೋಣ. ಒಕ್ಕಲಿಗರು ಗೌಡರು ಅಂದರೆ ಅನ್ನ ಹಾಕಿ ಪಂಚಾಯಿತಿ ಮಾಡುವುದು. ನಾವು ಸನ್ಯಾಸಿಗಳಾಗಿ, ಅಸಹಾಯಕರಾಗಿ ಮನೆಯಲ್ಲೇ ಇರುವುದು ಅಲ್ಲ. ನಮಗೆ ತೊಂದರೆಯಾದಾಗ ಹೊರಗಡೆ ಬರಬೇಕು ಎಂದು ತಿಳಿಸಿದರು. ಐಎಎಸ್​, ಕೆಎಎಸ್​ ಅಧಿಕಾರಿಗಳಾಗಿ ಕೋಲಾರದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂತರಾಜು ಆಯೋಗದ ವರದಿಯಲ್ಲಿ ಒಕ್ಕಲಿಗರಿಗೆ ಅನ್ಯಾಯ ವಾಗುತ್ತಿದೆ ಎಂಬುದನ್ನು ದಾಖಲು ಮಾಡಿದ್ದಾರೆ. ಸಮುದಾಯದ ಜನಪ್ರತಿನಿಧಿಗಳು ಮಾತ್ರ ಧ್ವನಿ ಎತ್ತುತ್ತಿಲ್ಲ, ಅನ್ಯಾಯ ಸರಿಪಡಿಸಿಕೊಳ್ಳದಿದ್ದರೆ ಮೀಸಲಾತಿಗೆ ತೊಂದರೆಯಾಗುತ್ತದೆ ಎಂದರು.

ಮುಖಂಡರಾದ ಆಲಂಗೂರು ಶಿವಣ್ಣ, ಡಾ.ವೈ.ವಿ.ವೆಂಕಟಚಲಪತಿ, ಬಾಬು ಮೌನಿ, ಎನ್​.ನಾಗರಾಜ್​, ರವಿ ಕುಮಾರ್​, ಸುನಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net