ಬಿಸಿ ಸಾಂಬಾರ್​ ಮೈಮೇಲೆ ಬಿದ್ದು ಒಂದೂವರೆ ವರ್ಷದ ಮಗು ಸಾವು

baby death
Published on

ಚನ್ನಪಟ್ಟಣ: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿಯಲ್ಲಿ ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟಿದೆ.

ದೇವರಹೊಸಹಳ್ಳಿಯ ಚೌಡೇಶ್​ ಮತ್ತು ರಾಧಾ ದಂಪತಿ ಪುತ್ರ ಧನ್ವಿಕ್​ ಮೃತ ಮಗು. ಸೋಮವಾರ ರಾತ್ರಿ ಮನೆಯಲ್ಲಿ ಮಗು ಗ್ಯಾಸ್​ ಸ್ಟೌವ್​ನ ಪೈಪ್​ ಹಿಡಿದು ಆಟವಾಡುವಾಗ ಸ್ಟೌವ್​ ಮೇಲಿದ್ದ ಸಾಂಬರ್​ ಪಾತ್ರೆ ಮೈಮೇಲೆ ಬಿದ್ದಿದೆ.

ಬಿಸಿ ಸಾಂಬರ್​​ ಮೈಮೇಲೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net