ಒಂದು ವಾರದ ಅಂತರದಲ್ಲಿ ಎರಡು ಕರುಗಳಿಗೆ ಜನ್ಮ ನೀಡಿದ ಎಮ್ಮೆ! ಸಾಗರದಲ್ಲಿ ಅಪರೂಪದ ಪ್ರಕರಣ

buffalo
Published on

ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನಾಡಕಲಸಿ ಗ್ರಾಮದಲ್ಲಿ ದುರ್ಗಪ್ಪ ಎಂಬುವರಿಗೆ ಸೇರಿದ ಎಮ್ಮೆಯೊಂದು ಅವಳಿ ಕರುಗೆ ಜನ್ಮ ನೀಡಿದೆ. ಅದರಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು. ಆದರೆ, ಒಂದೇ ದಿನ ಇವೆರಡಕ್ಕೂ ಜನ್ಮ ನೀಡಿಲ್ಲ ಎಂಬುದೇ ವಿಶೇಷ. ಇವೆರಡೂ ಕರುಗಳು ಒಂದು ವಾರದ ಅಂತರದಲ್ಲಿ ಜನಿಸಿವೆ!

ಸೆ.13ರಂದು ಗಂಡು ಕರು ಹಾಕಿದ್ದ ಎಮ್ಮೆ, ಸೆ.19ರಂದು ಹೆಣ್ಣು ಕರು ಹಾಕಿದೆ. ಈ ಎಮ್ಮೆಗೆ ಗರ್ಭ ಕಟ್ಟಲು ಇಂಜೆಕ್ಷನ್​ ಮಾಡಿಸಿರಲಿಲ್ಲ. ಎಮ್ಮೆಯನ್ನು ನಿತ್ಯವೂ ಮೇಯಲು ಬಿಡುತ್ತಿದ್ದರಿಂದ ಸಹಜವಾಗಿ ಗರ್ಭ ಧರಿಸಿತ್ತು. ಪಶು ಪರೀಕ್ಷಕಿ ಲಕ್ಷ್ಮೀ ಭಾಗವತ್,​ ಎಮ್ಮೆ ಮತ್ತು ಕರುಗಳನ್ನು ಪರೀಕ್ಷಿಸಿದ್ದು ಆರೋಗ್ಯವಾಗಿವೆ. ವಾರದ ಬಳಿಕ ಮತ್ತೊಂದು ಕರು ಹಾಕುವುದು ಅಪರೂಪವಾದ್ದರಿಂದ ಸುತ್ತಮುತ್ತಲಿನವರು ವೀಕ್ಷಣೆಗೆ ಧಾವಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net