More

    ಹುಳಿಯಾರು ಪೊಲೀಸ್​ ಠಾಣೆಯ ಸುಧಾ ಕೊಲೆ ಕೇಸ್​ಗೆ ಟ್ವಿಸ್ಟ್​: ಸುಪಾರಿ ಕೊಟ್ಟದ್ದು ಅದೇ ಠಾಣೆಯ ಮತ್ತೊಬ್ಬ ಮಹಿಳಾ ಪೇದೆ!

    ತುಮಕೂರು: ಹುಳಿಯಾರು ಪೊಲೀಸ್ ಠಾಣೆ ಮಹಿಳಾ ಪೇದೆ ಎಸ್.ಸುಧಾ ಕೊಲೆ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದೆ. ಇದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತೊಬ್ಬ ಮಹಿಳಾ ಪೇದೆ ರಾಣಿ ಎಂಬಾಕೆಯೇ ಕೊಲೆಗೆ ಸುಫಾರಿ ನೀಡಿದ್ದರು!

    ಪ್ರಕರಣ ಬಗೆದಷ್ಟು ಆಳ ಎಂಬಂತಿದೆ ಸುಧಾ ಪ್ರಕರಣ. ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಪಕ್ರರಣ ಇದೀಗ ರಾಣಿ ಎಂಬಾಕೆಯನ್ನ ಸುತ್ತಿಕೊಂಡಿದೆ. ಸುಧಾರನ್ನು ಕೊಲೆ ಮಾಡಲು ರಾಣಿ ಸುಫಾರಿ ನೀಡಿದ್ದಳು. ಅದರಂತೆ ಸುಧಾರನ್ನು ಕೊಲ್ಲಲು ಇವರ ಚಿಕ್ಕಮ್ಮನ ಮಗ ಮಂಜುನಾಥ(23), ಈತನ ಸ್ನೇಹಿತ ನಿಖೇಶ(30) ಇಬ್ಬರೂ ಸುಧಾರನ್ನು ಕಿಡ್ನ್ಯಾಪ್​ ಮಾಡಿದ್ದರು ಎಂದು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪಿಎಸ್​ಐ ಕೆ.ವಿ.ಮೂರ್ತಿ ಪ್ರಕರಣ ದಾಖಲಿಸಿದ್ದಾರೆ.

    ಅಕ್ಕ ಸುಧಾ ಅವರನ್ನು ಕೊಲೆ ಮಾಡಿದ ಬಳಿಕ ಸಹೋದರ ಮಂಜುನಾಥ್ ಶಿವಮೊಗ್ಗದ ಲಾಡ್ಜ್​ನಲ್ಲಿ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನುಳಿದ ಇಬ್ಬರು ಆರೋಪಿಗಳಾದ ಎಸ್.ರಾಣಿ ಹಾಗೂ ನಿಖೇಶ್​ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿತ ಮಹಿಳಾ ಪೊಲೀಸ್ ಪೇದೆ ರಾಣಿಯನ್ನು ಇಲಾಖೆ ವಿಚಾರಣೆಗೆ ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ.

    ಏನಿದು ಪ್ರಕರಣ?: ಶಿವಮೊಗ್ಗ ನಗರದ ಲಾಡ್ಜ್​ವೊಂದರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿಯ ಮಂಜುನಾಥ್(26) ಸೆ.16ರಂದು ಶವವಾಗಿ ಪತ್ತೆಯಾಗಿದ್ದ. ಈತ ಹುಳಿಯಾರು ಪೊಲೀಸ್​ ಠಾಣೆಯ ಪೇದೆ ಸುಧಾ ಅವರ ಚಿಕ್ಕಮ್ಮನ ಮಗ. ಸೆ.13ರಂದು ಸುಧಾ ಮತ್ತು ಮಂಜುನಾಥ್​ ಚಿಕ್ಕನಾಯಕನಹಳ್ಳಿಯಿಂದ ಜತೆಯಾಗಿ ಕಾರಿನಲ್ಲಿ ಹೊರಟಿದ್ದರು. ಅಂದು ರಾತ್ರಿ 8.40ರಿಂದ ಇಬ್ಬರ ಫೋನ್ ಸಂಪರ್ಕ ಕಡಿತವಾಗಿತ್ತು. ಸುಧಾ ನಾಪತ್ತೆಯಾಗಿದ್ದಾರೆ ಎಂದು ಹುಳಿಯಾರು ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸುಧಾಗಾಗಿ ಹುಡುಕಾಟ ನಡೆಯುತ್ತಿತ್ತು.

    ಅತ್ತ ಶಿವಮೊಗ್ಗದ ಲಾಡ್ಜ್​​ಗೆ ಆಗಮಿಸಿದ್ದ ಮಂಜುನಾಥ್​, ರೂಮಿನಿಂದ ಹೊರ ಬಂದಿರಲಿಲ್ಲ. ಅನುಮಾನಗೊಂಡು ಸೆ.16ರ ಸಂಜೆ ಬಾಗಿಲು ತೆಗೆದಾಗ ಮಂಜುನಾಥ್​ ಶವ ಪತ್ತೆಯಾಗಿತ್ತು. ಅಲ್ಲಿ ಡೆತ್​ನೋಟ್​ ಕೂಡ ಸಿಕ್ಕಿತ್ತು. ‘ನನ್ನ ದೊಡ್ಡಮ್ಮನ ಮಗಳಾದ ಸುಧಾಳನ್ನು ಕೊಲೆ ಮಾಡಿ ಬೀದಿ ಹೆಣ ಮಾಡಿದ್ದೇನೆ’ ಎಂದು ಡೆತ್‌ನೋಟ್ ಬರೆದಿಟ್ಟಿದ್ದ. ಈ ಪ್ರಕರಣ ಸುಧಾ ಅವರ ಮನೆಯಲ್ಲಿ ಆತಂಕ ಸೃಷ್ಟಿಸಿತ್ತು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾ ನಾಪತ್ತೆ ಪ್ರಕರಣ ತುಮಕೂರು ಜಿಲ್ಲೆಯಲ್ಲಿ ಭಾರೀ ಸುದ್ದಿಯಾಗಿತ್ತು. ಪೊಲೀಸರೂ ಸುಧಾಗಾಗಿ ಹುಡುಕಾಟ ಮುಂದುವರಿಸಿದ್ದರು.

    ಸೆ.17ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅರಸೀಕೆರೆ-ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರ ಮೈಲನಹಳ್ಳಿ ಗ್ರಾಮದ ಬಳಿ ಪೊದೆಯೊಂದರಲ್ಲಿ ಸುಧಾ ಶವ ಪತ್ತೆಯಾಗಿತ್ತು. ಸುಧಾ ಅವರ ಪತಿ ಎರಡು ವರ್ಷದ ಹಿಂದೆ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಇದ್ದಾರೆ.

    ಆನ್​ಲೈನ್​ ಬೆಟ್ಟಿಂಗ್​ಗೆ ದಾಸನಾಗಿದ್ದ ಮಂಜುನಾಥ್​, ಹಣಕಾಸು ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದ. ಸಹೋದರಿ ಸುಧಾ ಬಳಿ ಹಣ ಪಡೆದಿದ್ದ. ಇದನ್ನು ಕೇಳಿದ್ದಕ್ಕೆ ಕುಪಿತಗೊಂಡಿದ್ದ. ಆರೋಗ್ಯ ಸರಿ ಇಲ್ಲ, ಆಸ್ಪತ್ರೆಗೆ ತೋರಿಸು ಎಂದು ಸುಧಾಗೆ ಒತ್ತಾಯಿಸಿದ್ದ ಮಂಜುನಾಥ್​ ಸೆ.13ರಂದು ಚಿಕ್ಕನಾಯಕನಹಳ್ಳಿಗೆ ಹೋಗಿ ಆಸ್ಪತ್ರೆಗೆ ತೋರಿಸಿಕೊಳ್ಳುವ ನೆಪದಲ್ಲಿ ಸುಧಾ ಜತೆ ಕಾರಿನಲ್ಲಿ ತೆರಳಿದ್ದ. ಹಣಕಾಸಿನ ವಿಚಾರಕ್ಕೆ ಅಕ್ಕನನ್ನೇ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಎನ್ನಲಾಗಿತ್ತು. ಆದರೀಗ ಸುಧಾರ ಕೊಲೆ ಕೇಸ್​ನಲ್ಲಿ ಮಂಜುನಾಥ್​ ಮಾತ್ರವಲ್ಲ, ಇನ್ನೂ ಇಬ್ಬರು ಇದ್ದಾರೆ. ಅದರಲ್ಲಿ ಓರ್ವ ಆರೋಪಿ ಮಹಿಳಾ ಪೇದೆ ರಾಣಿ!

    ಸುಧಾ ಕೆಲಸ ಮಾಡುತ್ತಿದ್ದ ಹುಳಿಯಾರು ಪೊಲೀಸ್​ ಠಾಣೆಯಲ್ಲೇ ರಾಣಿ ಕೂಡ ಪೇದೆಯಾಗಿದ್ದರು. ಸುಧಾರನ್ನು ಕೊಲ್ಲುವಂತೆ ಮಂಜುನಾಥ್​ ಮತ್ತು ಈತನ ಗೆಳೆಯ ನಿಖೇಶ್​ಗೆ ಕುಮ್ಮಕ್ಕು ಕೊಟ್ಟದ್ದು ರಾಣಿ ಎಂದು ಕೇಸ್​ ದಾಖಲಾಗಿದೆ.

    ಹುಳಿಯಾರು ಠಾಣೆ ಮಹಿಳಾ ಪೇದೆ ಕೊಲೆ: ಸ್ನೇಹಿತನ ಜತೆ ಸೇರಿ ಗಂಡನನ್ನು ಕೊಂದಿದ್ದಳಾ ಅಕ್ಕ? ಡೆತ್​ನೋಟಲ್ಲಿದೆ ಆಘಾತಕಾರಿ ವಿಷ್ಯ…

    ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಲೇ ಪ್ರಾಣ ಬಿಟ್ಟ! ಡಿಜೆ ಸೌಂಡ್ಸ್​ ಎಫೆಕ್ಟ್​ಗೆ ಹೃದಯಾಘಾತ?

    ‘ಶ್ರೀನಿವಾಸಪುರದ ಮಹಾನಾಯಕ’ನೇ ಸಿದ್ದುಗೆ ಕಿವಿಯೂದಿ ಮೈತ್ರಿ ಸರ್ಕಾರದ ಕತೆ ಮುಗಿಸಿದ್ದು: ಎಚ್​ಡಿಕೆ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts