ರೌಡಿಶೀಟರ್​ ಹೆಬ್ಬೆಟ್​ ಮಂಜನ ಹೆಸರಲ್ಲಿ ಬೆದರಿಕೆ: ಭಟ್ಕಳದ ಮಹಿಳೆ ಬಂಧನ

hebbet manja
Published on

ಶಿವಮೊಗ್ಗ: ಕುಖ್ಯಾತ ರೌಡಿಶೀಟರ್​ ಹೆಬ್ಬೆಟ್​ ಮಂಜನ ಹೆಸರಲ್ಲಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮಹಿಳೆಯೊಬ್ಬರನ್ನು ಸೈಬರ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭಟ್ಕಳದ ಸಾಹಿರಾ ಬಾನು ಬಂಧಿತ ಮಹಿಳೆ. ಈಕೆ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸದ್ದಾಂ ಎಂಬಾತನ ಪತ್ನಿ.

ಇತ್ತೀಚೆಗೆ ಸದ್ದಾಂ ಜೈಲಿನಿಂದಲೇ ನಗರದ ಉದ್ಯಮಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ತಾನು ಹೆಬ್ಬೆಟ್ ಮಂಜನ ಕಡೆಯವನು ಎಂದು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದರಿಂದ ಆತಂಕಗೊಂಡ ಉದ್ಯಮಿ ಒಮ್ಮೆ ಸದ್ದಾಂ ಪತ್ನಿ ಸಾಹಿರಾ ಬಾನು ಬ್ಯಾಂಕ್​ ಖಾತೆಗೆ 50 ಸಾವಿರ ರೂ. ಹಾಕಿದ್ದ. ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಉದ್ಯಮಿ ಸೈಬರ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಇನ್​ಸ್ಪೆಕ್ಟರ್​ ಕೆ.ಟಿ.ಗುರುರಾಜ್​ ನೇತೃತ್ವದ ತಂಡ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net