ಇಂದು ಬೆಳ್ಳಂಬೆಳಗ್ಗೆ ಅಮೆರಿಕ ರಾಯಭಾರಿ ಕಚೇರಿ ಮೇಲೆ ರಾಕೆಟ್​ ದಾಳಿ

us embassy
Published on

ಬಾಗ್ದಾದ್: ಇರಾಕ್​ ರಾಜಧಾನಿ ಬಾಗ್ದಾದ್​ನಲ್ಲಿ ಅಮೆರಿಕ ರಾಯಭಾರಿ ಕಚೇರಿ ಮೇಲೆ ಇಂದು(ಗುರುವಾರ) ಬೆಳ್ಳಂಬೆಳಗ್ಗೆ ರಾಕೆಟ್​ ದಾಳಿ ನಡೆಸಲಾಗಿದೆ ಎಂದು ಇರಾಕಿನ ಭದ್ರತಾ ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.

ರಾಯಭಾರ ಕಚೇರಿಯ ರಾಕೆಟ್ ವಿರೋಧಿ ವ್ಯವಸ್ಥೆಯು ರಾಕೆಟ್‌ಗಳಲ್ಲಿ ಒಂದನ್ನು ಬೇರೆಡೆಗೆ ತಿರುಗಿಸಿದರೆ, ಎರಡನೇ ರಾಕೆಟ್ ವಲಯದ ಪರಿಧಿಯ ಬಳಿ ಬಿದ್ದಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ರಾಯಭಾರ ಕಚೇರಿ ಹಸಿರು ವಲಯದೊಳಗಿದ್ದು, ಕಾಂಪೌಂಡ್‌ನಲ್ಲಿ ಸೈರನ್‌ಗಳು ಸ್ಫೋಟಗೊಂಡಿವೆ.

ಅಪ್ಘಾನಿಸ್ತಾನದಿಂದ ಸೇನಾಪಡೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನ ಅಮೆರಿಕ ಆರಂಭಿಸಿದೆ. ಈ ನಡುವೆ ಇತರ ಪ್ರದೇಶಗಳಲ್ಲಿರುವ ಯುಎಸ್​ ಕಚೇರಿಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಬಾಗ್ದಾದ್​ನಲ್ಲಿ ರಾಯಭಾರಿ ಕಚೇರಿ ಮೇಲೆ ರಾಕೆಟ್​ ದಾಳಿ ಕುರಿತು ಅಮೆರಿಕ ಇನ್ನು ಪ್ರತಿಕ್ರಿಯಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net