

ಬೆಂಗಳೂರು: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಸಹಕಾರಿಯಾಗಿ ವರ್ತಿಸಲು ರೋಬಾಟ್ ಬಂದಿವೆ. ಮಿಲಾಗ್ರೋ ಸಂಸ್ಥೆಯು ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ‘ಐಮ್ಯಾಪ್-9’ ಮತ್ತು ‘ಹ್ಯೂಮನಾಯ್ಡ್ ಇಎಲ್ಫ್’ ಹೆಸರಿನಲ್ಲಿ ಎರಡು ರೋಬಾಟ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಅಂತರ ಕಾಯ್ದುಕೊಂಡು ರೋಗಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಸಹಕರಿಸಲಿದೆ.
ಐಸಿಎಂಆರ್ ಶಿಫಾರಸು ಮಾಡಲಾದ ಸೋಡಿಯಂ ಹೈಡ್ರೋಕ್ಲೊರೈಟ್ಸ್ ಸಲ್ಯೂಷನ್ ಬಳಸಿ ಐಮ್ಯಾಪ್ ರೋಬೋ ಆಸ್ಪತ್ರೆಯ ನೆಲ ಸ್ವಚ್ಛಗೊಳಿಸಲಿದೆ. ಈಗಾಗಲೇ ಇದನ್ನು ದೆಹಲಿಯ ಏಮ್ಸ್ನಲ್ಲಿ ಬಳಸಲಾಗುತ್ತಿದೆ. ಹ್ಯೂಮನಾಯ್ಡ್ ಇಎಲ್ಫ್ ರೋಗಿಗಳನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ನೆರವಾಗಲಿದೆ.
ಆಸ್ಪತ್ರೆ ಸುತ್ತ ಸಂಚರಿಸಲಿದ್ದು, ಸುತ್ತಮುತ್ತಲಿನ ಅಂಶವನ್ನು ವೀಡಿಯೋ ಮತ್ತು ಆಡಿಯೋ ರೆಕಾರ್ಡ್ ಮಾಡಲಿದೆ. ಇದು 8 ಗಂಟೆಗಳ ಬ್ಯಾಟರಿ ಬ್ಯಾಕ್ಅಪ್ ಹೊಂದಿದೆ ಎಂದು ಮಿಲಾಗ್ರೋ ಕಂಪನಿ ಅಧ್ಯಕ್ಷ ರಾಜೀವ್ ಕಾರ್ವಾಲ್ ತಿಳಿಸಿದ್ದಾರೆ.