ಆರಗದಲ್ಲಿ ಅಪರೂಪದ ಗರುಡ ಪದ್ಧತಿಯ ಶಿರಶ್ಛೇದನ ಶಿಲ್ಪ ಪತ್ತೆ !

Garuda style beheading sculpture found
ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ಪತೆಯಾದ ಗರುಡ ಪದ್ಧತಿಯ ಶಿರಶ್ಛೇದನ ಶಿಲ್ಪ.
Published on

ಶಿವಮೊಗ್ಗ: ಹೋಯ್ಸಳದ ಕಾಲದ ಅಪರೂಪದ ಗರುಡ ಪದ್ಧತಿಯ ಶಿರಶ್ಚೇದನ ಸ್ಮಾರಕ ಶಿಲ್ಪವು ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಇದುವರೆಗೆ ಕರ್ನಾಟಕದ ಹಳೇಬೀಡು, ಅಗ್ರಹಾರ ಬಾಚಿಹಳ್ಳಿಯಲ್ಲಿ ಮಾತ್ರ ಕಂಡುಬಂದಿದ್ದ ವಿಶೇಷ ಸ್ಮಾರಕವು ಇದೀಗ ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ದೊರೆತಿದೆ.

ಅಪರೂಪದ ಶಿಲ್ಪವನ್ನು ಗರುಡ ಸ್ಥಂಬವೆಂದು ಕರೆಯುತ್ತಾರೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಪ್ರಭಾರ ನಿರ್ದೇಶಕ ಡಾ. ಆರ್.ಶೇಜೇಶ್ವರ ಅವರು ಕ್ಷೇತ್ರ ಕಾರ್ಯ ಕೈಗೊಂಡಾಗ ಆರಗದ ವೀರಭದ್ರ ದೇವಾಲಯದ ಆವರಣದಲ್ಲಿ ಎರಡು ಮೀಟರ್ ಉದ್ದದ ಗ್ರಾನೈಟ್ ಶಿಲೆಯ ಗರುಡ ಪದ್ಧತಿಯ ಶಿರಶ್ಛೇದನ ಸ್ಮಾರಕ ಶಿಲ್ಪ ಪತ್ತೆಯಾಗಿದೆ.
ಶಿಲ್ಪವು ಮೂರು ಪಟ್ಟಿಕೆಗಳಿಂದ ಕೂಡಿದ್ದು ಕೆಳಗಿನ ಪಟ್ಟಿಕೆಯಲ್ಲಿ ವೇಳಾವಳಿ ಅಥವಾ ಗರುಡ ಹೋಗುವ ವೀರ ಕುದುರೆ ಮೇಲೆ ಕುಳಿತು ಕತ್ತಿ ಹಿಡಿದಿದ್ದಾನೆ. ಅವನಿಗೆ ಹಿಂಭಾಗದಲ್ಲಿ ಛತ್ರಿಯನ್ನು ಸೇವಕ ಹಿಡಿದಿದ್ದಾನೆ. ಆದ್ದರಿಂದ ಇವನನ್ನು ರಾಜ ಪ್ರಮುಖನೆಂದೂ ಕರೆಯಬಹುದು. ಹಿಂಭಾಗದಲ್ಲಿ ಮಹಿಳೆ ಕತ್ತಿ ಹಿಡಿದಿದ್ದಾಳೆ. ಎರಡನೇ ಪಟ್ಟಿಕೆಯಲ್ಲಿ ಗರುಡ ಹೊದಾಂತಹ ವೀರನು ವೀರಾಸನದಲ್ಲಿ ನಿಂತಿದ್ದು ರುಂಡ ಕತ್ತರಿಸಿದ್ದು ಬಲಗೈಯಲ್ಲಿ ಕತ್ತಿ ಹಿಡಿದು ಮುಂಡದ ಮೇಲೆ ಹಲಗೆಯ ರೀತಿ ಹೊತ್ತುಕೊಂಡು ಅದನ್ನು ಕೈಯಲ್ಲಿ ಹಿಡಿದಿರುವಂತಿದೆ. ಈ ಶಿರಶ್ಛೇದನ ಶಿಲ್ಪದ ಪಕ್ಕದಲ್ಲಿ ಮಹಿಳೆಯು ಶಿರಶ್ಚೇದನಗೊಂಡ ರುಂಡವನ್ನು ಕೈಯಲ್ಲಿ ಹಿಡಿದು ನಿಂತಿದ್ದಾಳೆ. ಮೂರನೇ ಪಟ್ಟಿಕೆಯಲ್ಲಿ ಪಟ್ಟಿಕೆಯ ಶಿಲ್ಪಗಳ ಬದಲು ಲಿಂಗದ ರೀತಿಯಲ್ಲಿ ಇರುವ ಕಂಬವಿದ್ದು ಅದರಲ್ಲಿ ಲಿಂಗದ ಉಬ್ಬು ಶಿಲ್ಪವಿದೆ. ಈ ಲಿಂಗ ಅಥವಾ ಕಂಬದ ಮೇಲೆ ಸಮತಟ್ಟಾಗಿರುವುದು ವಿಶೇಷ ಎಂದು ಡಾ. ಆರ್.ಶೇಜೇಶ್ವರ್ ಬಣ್ಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net