ಹಿಜಾಬ್​ ಧರಿಸಿಯೇ ಪಾಠ ಮಾಡಿದ ಶಿಕ್ಷಕಿಯರು! ವಿದ್ಯಾರ್ಥಿನಿಯರು ಮಾತ್ರ ಹೈಕೋರ್ಟ್​ ಆದೇಶ ಪಾಲಿಸಿ ಮಾದರಿ ಆದ್ರು

hijab
Published on

ರಾಯಚೂರು: ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿನಿಯರು ಶಾಲೆಗೆ ಬರುತ್ತಿದ್ದಂತೆ ಹಿಜಾಬ್​ ತೆಗೆದಿಟ್ಟು ತರಗತಿಯೊಳಗೆ ಕೋವಿಡ್​ ನಿಯಮ ಪಾಲಿಸುತ್ತಾ ಕುಳಿತರು. ಆದರೆ, ಇಲ್ಲಿನ ಶಿಕ್ಷಕಿಯರು ಮಾತ್ರ ಬುರ್ಕಾ-ಹಿಜಾಬ್​ ಧರಸಿಕೊಂಡೇ ಮಕ್ಕಳಿಗೆ ಪಾಠ ಮಾಡಿದ್ದಾರೆ. ಇಂತಹ ಘಟನೆ ರಾಯಚೂರು ನಗರದ ಪೋರ್ಟ್ ಪ್ರೌಢಶಾಲೆಯಲ್ಲಿ ಸೋಮವಾರ ಸಂಭವಿಸಿದೆ.

ಹಿಜಾಬ್ ತೆಗೆದು ಪಾಠ ಕೇಳಲು ತರಗತಿಗಳಲ್ಲಿ ಕುಳಿತ ಮಕ್ಕಳು, ಕೊವೀಡ್ ನಿಯಮವನ್ನೂ ಪಾಲಿಸುವ ಮೂಲಕ ಮಾಸ್ಕ್ ಧರಿಸಿದ್ದರು. ಹೈಕೋರ್ಟ್​ನ​ ಆದೇಶ ಪಾಲಿಸುವ ಮೂಲಕ ಈ ಮಕ್ಕಳೂ ರಾಜ್ಯದ ಎಲ್ಲ ಶಾಲೆಗೂ ಮಾದರಿ ಎನ್ನಿಸಿದರು. ಆದರೆ, ಶಿಕ್ಷಕಿಯರು ಮಾತ್ರ ಹಿಜಾಬ್​ ತೆಗೆಯಲೇ ಇಲ್ಲ.

ಶಾಲಾ-ಕಾಲೇಜುಗಳ ತರಗತಿಯೊಳಗೆ ಹಿಜಾಬ್​, ಕೇಸರಿ ಶಾಲುಗಳನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್‌ ಪೂರ್ಣಪೀಠ ಮಧ್ಯಂತರ ಆದೇಶ ನೀಡಿದ್ದರೂ ಶಿಕ್ಷಕಿಯರು ಕ್ಯಾರೆ ಎಂದಿಲ್ಲ.

ರಾಜ್ಯದೆಲ್ಲಡೆ ಇಂದು ಬಹುತೇಕ ಶಾಲೆಗಳಿಗೆ ಹಿಜಾಬ್​ ಧರಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಬಂದಿದ್ದರು. ಕೆಲವೆಡೆ ಮಕ್ಕಳಿಗೆ ತಿಳಿಹೇಳಿ ಹಿಜಾಬ್​ ತೆಗೆಸಿ ಶಾಲೆ ಪ್ರವೇಶಕ್ಕೆ ಅನುವು ಮಾಡಿಕೊಡುವಲ್ಲಿ ಆಡಳಿತ ಮಂಡಳಿ ಹರಸಾಹಸಪಟ್ಟಿದೆ. ಕೆಲ ಮಕ್ಕಳು ಹಿಜಾಬ್​ ತೆಗೆಯಲು ಒಪ್ಪದೆ ವಾಪಸ್​ ಮನೆಗೆ ಹೋಗಿದ್ದಾರೆ, ಕೆಲ ಮಕ್ಕಳು ಹಿಜಾಬ್​ ಧರಿಸಿಯೇ ತರಗತಿಗೆ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net