More

    ಶಾಲೆಗಳಿಗೆ ಶಿಕ್ಷಕಿಯರೇ ಹಿಜಾಬ್​ ಧರಿಸಿ ಬಂದ್ರು! ಮಂಡ್ಯ, ಕಲಬುರಗಿ, ರಾಯಚೂರು, ವಿಜಯಪುರದಲ್ಲಿ ಘಟನೆ

    ಬೆಂಗಳೂರು: ಶಾಲಾ-ಕಾಲೇಜುಗಳ ತರಗತಿಯೊಳಗೆ ಹಿಜಾಬ್​, ಕೇಸರಿ ಶಾಲುಗಳನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್‌ ಪೂರ್ಣಪೀಠ ಮಧ್ಯಂತರ ಆದೇಶ ನೀಡಿದ್ದರೂ ಇಂದು(ಸೋಮವಾರ) ರಾಜ್ಯದ ಕೆಲವೆಡೆ ಮುಸ್ಲಿಂ ಶಿಕ್ಷಕಿಯರೇ ಹಿಜಾಬ್​ ಧರಿಸಿ ಶಾಲೆಗೆ ಬಂದ ಘಟನೆ ಸಂಭವಿಸಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ‌ದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೆ ಬಂದರೆ, ಶಿಕ್ಷಕಿಯೊಬ್ಬರು ಹಿಜಾಬ್ ಧರಿಸಿ‌ ಬಂದು ಒಡಾಟ ನಡೆಸಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಸಿದ್ದರು. ಹೈಕೋರ್ಟ್​ನ ಮಧ್ಯಂತರ ಆದೇಶವಿದೆ, ಶಾಲೆಯೊಳಗೆ ಹಿಜಾಬ್​ ಹಾಕಬೇಡಿ ಎಂದು ಶಾಲೆಯ ಮುಖ್ಯಶಿಕ್ಷಕರು ಹೇಳಿದರೂ ಆ ಶಿಕ್ಷಕಿ ಕೇಳಲಿಲ್ಲ. ಹಿಜಾಬ್ ತೆಗೆಯದ ಹಿನ್ನೆಲೆ ಶಿಕ್ಷಕಿಯನ್ನ ರಜೆ ಮೇಲೆ ಆಡಳಿತ ಮಂಡಳಿ ಮನೆಗೆ ಕಳಿಸಿತು.

    ಮಂಡ್ಯ ನಗರದ ರೋಟರಿ ವಿದ್ಯಾಸಂಸ್ಥೆಗೆ ಬುರ್ಕಾ ಹಾಕಿಕೊಂಡು ಬಂದ ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿ ಗೇಟ್‌ನಲ್ಲೇ ತಡೆಯಿತು. ಹೈಕೋರ್ಟ್​ ಮಧ್ಯಂತರ ಆದೇಶದ ಅನುಸಾರ ಬುರ್ಕಾ ತೆಗೆದು ಶಾಲೆ ಒಳಹೋಗುವಂತೆ ಸೂಚಿಸಿದರು. ಬಳಿಕ ಆ ಶಿಕ್ಷಕಿ ಗೇಟ್‌ನಲ್ಲೇ ಬುರ್ಕಾ ತೆಗೆದು ಒಳಹೋದರು.

    ಕಲಬುರಗಿಯಲ್ಲೂ ಶಾಲಾ ಶಿಕ್ಷಕಿಯರು ಹಿಜಾಬ್ ಧರಿಸಿಕೊಂಡೇ ಬಂದು ಸ್ಟಾಫ್​​ ರೂಂನಲ್ಲಿ ಕುಳಿತಿದ್ದ ದೃಶ್ಯ ಕಂಡು ಬಂತು. ರಾಯಚೂರು ನಗರದ ಪೋರ್ಟ್ ಪ್ರೌಢಶಾಲೆಗೆ ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್​ ತೆಗೆದು ಕುಳಿತರು. ಆದರೆ, ಶಿಕ್ಷಕಿ ಮಾತ್ರ ಹಿಜಾಬ್, ಬುರ್ಕಾ ಧರಿಸಿಯೇ ಪಾಠ ಮಾಡಿದರು.

    ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ನಿಷೇಧಿಸಿ ಹೊರಡಿಸಿದ್ದ ಸರ್ಕಾರದ ಆದೇಶ ರದ್ದು: ಹೈಕೋರ್ಟ್​

    ಆಸ್ಪತ್ರೆಯಲ್ಲೇ ಕುಸಿದುಬಿದ್ದ ನರ್ಸ್ ಮೇಲಕ್ಕೆ ಏಳಲೇ ಇಲ್ಲ… ಸಾವಲ್ಲೂ ಸಾರ್ಥಕತೆ ಮೆರೆದ ಗಾನವಿ, ಈ ಸ್ಟೋರಿ ಓದಿದ್ರೆ ಮನಸ್ಸು ಭಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts