

ಮುಂಬೈ: ಭಾರತದ ಖ್ಯಾತ ಗಾಯಕ ಸೋನ್ ನಿಗಮ್(Sonu Nigam) ಒಂದಲ್ಲೊಂದು ವಿಷಯಗಳಿಗೆ ಅಗ್ಗಾಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಬಗ್ಗೆ ವೈಯಕ್ತಿಕ ವಿಚಾರಗಳನ್ನು ಮಾತನಾಡಿದ್ದು, ನೆಟ್ಟಗರ ಟೀಕೆಗೆ ಗುರಿಯಾಗಿದ್ದಾರೆ.
ಹೌದು, ಸೋನು ನಿಗಮ್ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಹಾಡುಗಳನ್ನು ಹಾಡಿದ್ದಾರೆ, ಅದು ವಿಭಿನ್ನ ಪ್ರಕಾರಗಳಲ್ಲಿ ಅವರ ಬಹುಮುಖತೆಯನ್ನು ಪ್ರದರ್ಶಿಸಿದೆ. ಸೋನು ನಿಗಮ್ ಅವರು ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆನ ಅಪಾರ. ಆದರೆ, ಇವರು ಹಲವು ಬಾರಿ ವಿವಾದಗಳಿಗೆ ಸುದ್ದಿಯಾಗಿದ್ದಾರೆ. ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೀಗಾಗಿ, ನೆಟ್ಟಿಗರು ಗರಂ ಆಗಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡದ ಸಂದರ್ಶನದಲ್ಲಿ ಮಾತನಾಡಿದ ಸೋನು ನಿಗಮ್, ''ಸಂಗೀತಗಾರ ಎ.ಆರ್.ರೆಹಮಾನ್ ಸಂಬಂಧಗಳನ್ನು ಹೊಂದಿರುವ ವ್ಯಕ್ತಿ, ಇದರ ಬಗ್ಗೆ ಯಾರೊಂದಿಗೂ ತಿಳಿಸದ ವ್ಯಕ್ತಿಯಲ್ಲ. ನಾನು ಅದರ ಬಗ್ಗೆ ನೋಡಿಲ್ಲ, ಆದರೆ, ಈ ವಿಷಯಗಳನ್ನು ಅವರ ಹಳೆಯ ಸ್ನೇಹಿತರ ಮುಂದೆ ಹಂಚಿಕೊಂಡಿದ್ದಾನೆ. ಅವರು ಸ್ನೇಹಪರ ವ್ಯಕ್ತಿಯಲ್ಲ. ನಾನು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲು ಬಯಸಲ್ಲ'' ಎಂದಿದ್ದಾರೆ.
''ಅವರಿಗೆ ಗಾಸಿಪ್ ಮಾಡುವುದು ಹೇಗೆ ಎಂದು ತಿಳಿದಿಲ್ಲ, ಅವನು ನನ್ನ ಬಗ್ಗೆ ಅಥವಾ ಬೇರೆಯವರ ಬಗ್ಗೆ ಏನನ್ನೂ ತಿಳಿದುಕೊಳ್ಳಲು ಬಯಸುವುದಿಲ್ಲ ಮತ್ತು ಅವನ ಬಗ್ಗೆ ಬೇರೆಯವರು ತಿಳಿದುಕೊಳ್ಳಲು ಬಯಸುವುದಿಲ್ಲ. ಅವರದು ವಿಶಿಷ್ಟ ವ್ಯಕ್ತಿತ್ವ. ಅವನು ತನ್ನ ಕೆಲಸ ಮತ್ತು ಪ್ರಾರ್ಥನೆಯನ್ನು ಮಾಡುತ್ತಾನೆ. ಅವನು ಯಾರೊಂದಿಗೂ ಕೆಟ್ಟದಾಗಿ ವರ್ತಿಸುವುದಿಲ್ಲ. ಅವನು ಯಾರ ಹೃದಯವನ್ನೂ ನೋಯಿಸುವುದಿಲ್ಲ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ. ಈ ಎಲ್ಲದಕ್ಕೂ ಅವನು ನಿರ್ಲಿಪ್ತ. ಅವನು ತನ್ನ ಕುಟುಂಬಕ್ಕೆ ಅಂಟಿಕೊಂಡಿರಬೇಕು ಎಂಬಂತಿದ್ದಾನೆ. ಆದರೆ ಅವನು ಇತರರೊಂದಿಗೆ ತುಂಬಾ ಸ್ನೇಹದಿಂದ ಇರುವುದನ್ನು ನಾನು ನೋಡಿಲ್ಲ, ” ಎಂದಿದ್ದಾರೆ
ಇದೀಗ, ಈ ಹೇಳಿಕೆ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. ಅಲ್ಲದೆ, ಅವರ ವೈಯಕ್ತಿಕ ವಿಚಾರ ನಿಮಗೇಕೆ? ಎಂದು ಕಿಡಿಕಾರಿದ್ದಾರೆ.