

ಕೋಲಾರ: ಇಂದು ನಡೆಯಬೇಕಿದ್ದ ಬಿಕಾಂ ಮತ್ತು ಬಿಸಿಎ ಗಣಿತ ವಿಷಯದ ಪರೀಕ್ಷೆಯನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮುಂದೂಡಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ ಹಿನ್ನೆಲೆ ಪರೀಕ್ಷೆಯನ್ನು ಮುಂದೂಡಿರುವುದಾಗಿ ಬೆಂಗಳೂರು ಉತ್ತರ ವಿವಿಯ ಪ್ರಶ್ನೆ ಪತ್ರಿಕೆ ವಿಭಾಗದ ರಿಜಿಸ್ಟ್ರಾರ್ ಡಾಮಿನಿಕ್ ತಿಳಿಸಿದ್ದಾರೆ. ಎಂದಿನಂತೆ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು, ಪರೀಕ್ಷೆ ಮುಂದೂರಿಕೆ ಹಿನ್ನೆಲೆ ವಾಪಸ್ ಮನೆಗಳಿಗೆ ತೆರಳಿದರು.