ಲಾರಿಯ ಎಂಜಿನ್​ನಲ್ಲಿ ಸಿಲುಕಿ ಬರೊಬ್ಬರಿ 98ಕಿ.ಮೀ ಪ್ರಯಾಣಿಸಿದ ಹೆಬ್ಬಾವು; ಇಲ್ಲಿದೆ ನೋಡಿ ವೈರಲ್​ ​Video

video
Published on

ನವದೆಹಲಿ: ಉತ್ತರಪ್ರದೇಶದ ಕುಶಿನಗರದಿಂದ ಬಿಹಾರ್​ ನರ್ಕಟಿಯಾಗಂಜ್​ ಎಂಬ ಪ್ರದೇಶಕ್ಕೆ ಬರೊಬ್ಬರಿ 98 ಕಿಲೋಮೀಟರ್​ ದೈತ್ಯ ಹೆಬ್ಬಾವೊಂದು ಪ್ರಯಾಣಿಸಿದ ಘಟನೆ ನಡೆದಿರುವ ಘಟನೆ ನಡೆದಿದೆ.

ಹೌದು, ಉತ್ತರಪ್ರದೇಶದ ಕುಶಿನಗರದಿಂದ ತೆರಳುವ ಗೂಡ್ಸ್​ ಟ್ರಕ್​(ಲಾರಿ)​ನ ಇಂಜಿನ್​ಲ್ಲಿ ಅಡಗಿಕೊಂಡಿದ್ದ ಹೆಬ್ಬಾವು ಬಿಹಾರ್​ ನರ್ಕಟಿಯಾಗಂಜ್ ಪ್ರದೇಶದವರೆಗೂ ಪ್ರಯಾಣ ಮಾಡಿದೆ. ಟ್ರಕ್​ನ ಬ್ಯಾನೆಟ್​ ಒಳಗೆ ದೈತ್ಯ ಸರಿಸೃಪ(ಹೆಬ್ಬಾವು) ಅಡಗಿಕೊಂಡಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ದೃಶ್ಯವನ್ನು ನೋಡಲು ಸಹಸ್ರಾರು ಜನ ಟ್ರಕ್​ನತ್ತ ಬರುತ್ತಿರುವ ದೃಶ್ಯಗಳು ಕೂಡ ವಿಡಿಯೋದಲ್ಲಿ(Video) ನೋಡಬಹುದು. ಅಲ್ಲದೇ, 98 ಕಿ.ಮೀ ಪ್ರಯಾಣದಲ್ಲಿ ಚಾಲಕರ ಗಮನಕ್ಕೆ ಬಂದಿಲ್ಲ.

ನರ್ಕಟಿಯಾಗಂಜ್​​ನಲ್ಲಿ ರಸ್ತೆ ನಿರ್ಮಾಣದ ಯೋಜನೆಗಾಗಿ ಕುಶಿನಗರದಲ್ಲಿ ಟ್ರಕ್​ಗೆ ಕಲ್ಲು ತುಂಬುವ ವೇಳೆ ಟ್ರಕ್​ ಎಂಜಿನ್​ ಬಳಿ ಹಾವು ತೆರಳಿ ಅಲ್ಲಿ ಅಡಗಿಕೊಂಡಿದೆ ಎಂದು ವರದಿಗಳು ಉಲ್ಲೇಖಿಸಿವೆ.

''ಕಾರ್ಮಿಕರು ಕಲ್ಲುಗಳನ್ನು ಟ್ರಕ್​ನಿಂದ ಕೆಳಗೆ ಇಳಿಸಬೇಕಾದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ಹೆಬ್ಬಾವು ಕಂಡ ಕಾರ್ಮಿಕರು ಮತ್ತು ಜನರು ಆಶ್ಚರ್ಯಗೊಂಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇಲಾಖೆ ತಂಡ ಸ್ಥಳಕ್ಕೆ ಧಾವಿಸಿದ ಮೇಲೆ ಬ್ಯಾನೆಟ್​ನಿಂದ ಹಾವು ಅನ್ನು ಹೊರ ತಗೆಯಲಾಗಿದೆ. ಹೆಬ್ಬಾವಿಗೆ ಯಾವುದೇ ಗಾಯಗಳು ಮತ್ತು ಅಪಾಯ ಆಗಿಲ್ಲ. ಇದನ್ನು ಕೂಡಲೇ ಅರಣ್ಯಪ್ರದೇಶಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು '' ತಿಳಿಸಿದ್ದಾರೆ.

ಈ ಹಿಂದೆ ಇದೇ ಅಕ್ಟೋಬರ್​ನಲ್ಲಿ ಉತ್ತರಪ್ರದೇಶದ ಪತ್ತೆಪುರ್​ಸಿಕ್ರಿಯಲ್ಲಿ ಭತ್ತದ ಗದ್ದೆಯಲ್ಲಿ 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿರು ವಿಡಿಯೋ ವೈರಲ್​ ಆಗಿತ್ತು. ಇದಾದ ಬಳಿಕ ಇದೀಗ ಇಂತದ್ದೇ ಘಟನೆ ಬೆಳಕಿಗೆ ಬಂದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net