ಪುನೀತ್​ ಆರೋಗ್ಯ ಸ್ಥಿತಿ ಗಂಭೀರ: 'ಭಜರಂಗಿ 2' ಸಿನಿಮಾ ಪ್ರದರ್ಶನ ರದ್ದು

New Project (3)
Published on

ಬೆಂಗಳೂರು: ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ 'ಭಜರಂಗಿ 2' ಸಿನಿಮಾ ಪ್ರದರ್ಶನ ರದ್ದಾಗಿದೆ.

ಹಲವು ಅಡೆತಡೆಗಳನ್ನ ದಾಟಿ ಶಿವರಾಜ್​ಕುಮಾರ್​ ಅಭಿನಯದ ಭಜರಂಗಿ 2 ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿತ್ತು. ಅತ್ತ ಮೊದಲ ಶೋ ಪ್ರದರ್ಶನ ನಡೆಯುತ್ತಿದ್ದರೆ, ಇತ್ತ ಪುನೀತ್​ ರಾಜ್​ಕುಮಾರ್​ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಈ ವಿಷಯ ತಿಳಿದು ರಾಜ್​ಕುಮಾರ್​ ಕುಟುಂಬಸ್ಥರು ಕಣ್ಣೀರು ಹಾಕುತ್ತಲೇ ಆಸ್ಪತ್ರೆಗೆ ದೌಡಾಯಿಸಿದ್ದು, ಚಿತ್ರರಂಗದ ನಟ-ನಟಿಯರೂ ನೋವಿನಿಂದಲ್ಲೇ ಆಸ್ಪತ್ರೆಗೆ ಧಾವಿಸಿದ್ದು, ಸಿಎಂ ಹಾದಿಯಾಗಿ ಗಣ್ಯರು-ಅಧಿಕಾರಿಗೂ ಆಸ್ಪತ್ರೆ ಬಳಿಯೇ ಬೀಡು ಬಿಟ್ಟಿದದ್ದಾರೆ. ಕ್ಷಣಕ್ಷಣಕ್ಕೂ ಪುನೀತ್​ ರಾಜ್​ಕುಮಾರ್​ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದು, ಆತಂಕ ಮನೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಭಜರಂಗಿ 2 ಸಿನಿಮಾವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net