ಪುನೀತ್​ ರಾಜ್​ಕುಮಾರ್​ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಸಿದ್ದರಾಮಯ್ಯ ಆಗ್ರಹ

New Project (6)
Published on

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

'ಯಾವ ಪ್ರಶಸ್ತಿ-ಗೌರವಗಳಿಗಿಂತಲೂ ಪುನೀತ್ ರಾಜ್​ಕುಮಾರ್ ಗಳಿಸಿರುವ ಜನರ ಪ್ರೀತಿ-ಅಭಿಮಾನವೇ ದೊಡ್ಡದು. ಪುನೀತ್ ಬದುಕಿದ್ದರೆ ತನ್ನ ನಟನೆ ಮತ್ತು ಸಾಮಾಜಿಕ ಕಾಳಜಿಯಿಂದಾಗಿ ಖಂಡಿತ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುತ್ತಿದ್ದರು. ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿಯನ್ನ ನೀಡಬೇಕು' ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ 'ರಾಜಕುಮಾರ'ನಂತೆ ಮೆರೆದ ಪುನೀತ್​ ರಾಜ್​ಕುಮಾರ್​ ಇನ್ನು ನೆನಪು ಮಾತ್ರ. ಬಾಲ್ಯದಲ್ಲೇ ಚಿತ್ರರಂಗದಲ್ಲಿ ಮಿಂಚಿದ್ದ ಪುನೀತ್​, ಚಾಕೋಲೆಟ್​ ಹಿಡಿಯಬೇಕಿದ್ದ ಕೈಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ್ದರು. ಖಂಡಿತ ಅವರು ಬದುಕಿದ್ದರೆ ಮತ್ತಷ್ಟು ಪ್ರಶಸ್ತಿಗಳು ಅವರ ಮುಡಿಗೇರುತ್ತಿದ್ದವು ಎಂಬ ಮಾತು ಅಕ್ಷರಶಃ ನಿಜ. ಇನ್ನು ಕನ್ನಡಿಗರ ಪ್ರೀತಿಯ ಅಪ್ಪುಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಬೇಕು ಎಂಬ ಆಗ್ರಹವೂ ಅಭಿಮಾನಿಗಳಿಂದ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net