ಪತ್ನಿ ಜತೆ ಪುನೀತ್​ ಕ್ಲಿನಿಕ್​ಗೆ ಬಂದಿದ್ರು.. ತುಂಬಾ ಬೆವರುತ್ತಿದ್ದರು.. ಆಯಾಸ ಆಗಿದ್ದರು...

puneeth rajkumar
Published on

ಬೆಂಗಳೂರು: ಚಂದನವನದಲ್ಲಿ ಪವರ್​ ಸ್ಟಾರ್​ ಆಗಿ ಮಿಂಚಿದ್ದ ಮಿನುಗುತಾರೆ ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ನಿನ್ನೆ ಬೆಳಗ್ಗೆ ಪುನೀತ್​ಗೆ ಹೃದಯಾಘಾತ ಆದಾಗ ಆರಂಭದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟದ್ದು ಡಾ.ರಮಣರಾವ್. ಆ ವಿಷಾದನೀಯ ಕ್ಷಣದ ಬಗ್ಗೆ ಡಾ.ರಮಣರಾವ್​ ನೋವಿನಿಂದಲೇ ವಿವರಿಸಿದ್ದು ಹೀಗೆ...

'ಬೆಳಗ್ಗೆ 10 ಗಂಟೆಗೆ ಪುನೀತ್​ ಕ್ಲಿನಿಕ್​ಗೆ ಬಂದಿದ್ದರು. ಅವರ ಜತೆ ಪತ್ನಿಯೂ ಇದ್ದರು. ಜಿಮ್ ಮಾಡಿ ಸ್ಟೀಮ್ ತೆಗೆದುಕೊಂಡಿರುವುದಾಗಿ ಹೇಳಿದರು. ತುಂಬಾ ಬೆವರುತ್ತಿದ್ದರು. ಆಯಾಸ ಆಗಿದ್ದರು.... ಪುನೀತ್ ದೇಹವನ್ನು ತುಂಬಾ ಚೆನ್ನಾಗಿ ಇಟ್ಟುಕೊಂಡಿದ್ದರು. ಅವರಿಗೆ ಯಾವುದೇ ಕೆಟ್ಟ ಚಟ ಇರಲಿಲ್ಲ. ಇಲ್ಲಿಂದ 5 ನಿಮಿಷದಲ್ಲಿ ವಿಕ್ರಂ ಆಸ್ಪತ್ರೆ ತಲುಪಿದ್ದರು...' ಎನ್ನುತ್ತಲೇ ರಮಣರಾವ್​ ಭಾವುಕರಾದರು. 'ಪುನೀತ್​ ಮಾನಸಿಕವಾಗಿ ತುಂಬಾ ಶಾಂತವಾಗಿ ಇದ್ದರು. ಅಂದು ಡಾ.ರಾಜ್ ಆರೋಗ್ಯವನ್ನು ನಾನು ತಪಾಸಣೆ ನಡೆಸಿದ್ದೆ. ಸೋಫಾ ಮೇಲೆ ಕುಳಿತಿದ್ದಾಗಲೇ ಹೋಗಿಬಿಟ್ರು... ಪುನೀತ್ ತುಂಬಾ ಚಿಕ್ಕ ವಯಸ್ಸಿನಲ್ಲೇ ಹೀಗೆ ಆಗಿರುವುದು ನೋವಿನ ಸಂಗತಿ...' ಎಂದು ಗದ್ಗದಿತರವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net