ಆ ಒಂದು ಮಾತಿಗೆ.. ಆತ್ಮಹತ್ಯೆ ಮಾಡಿಕೊಂಡ ಪಿಯುಸಿ ವಿದ್ಯಾರ್ಥಿನಿ! | Suicide

untitled-design-16-68f8ca5506ac4
Published on

ಉತ್ತರ ಪ್ರದೇಶ: ತನ್ನ ಕಳಪೆ ಶೈಕ್ಷಣಿಕ ಸಾಧನೆಯಿಂದ ಬೇಸತ್ತ ಪಿಯುಸಿ(12ನೇ) ವಿದ್ಯಾರ್ಥಿನಿಯೊಬ್ಬಳು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಮಂಗಳವಾರ ತಡರಾತ್ರಿ ಸೋನಮ್ ಚೌಹಾಣ್ (18) ಅವರ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಟುಂಬ ಸದಸ್ಯರು ಅವರನ್ನು ನಾಗರಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು, ಆದರೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಚೌಹಾಣ್ ನಾಗರಾ ಪಟ್ಟಣದ ಜನತಾ ಇಂಟರ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಬಾಲಕಿ ತನ್ನ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡದಿದ್ದಕ್ಕಾಗಿ ಅಸಮಾಧಾನಗೊಂಡಿದ್ದಳು, ಅದು ಆಕೆಯನ್ನು ಈ ಸ್ಥಿತಿಗೆ(ಆತ್ಮಹತ್ಯೆ)ಪ್ರೇರೇಪಿಸಿರಬಹುದು ಎಂದು ಅಧಿಕಾರಿ ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net