

ರಾಯಚೂರು: ಬೇಸಿಗೆ ಆರಂಭದಲ್ಲೇ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಗಣನೀಯ ಏರಿಕೆಯಾಗುತ್ತಿದೆ. ಪ್ರಸ್ತುತ ರಾಜ್ಯದ ವಿದ್ಯುತ್ ಬೇಡಿಕೆ 14 ಸಾವಿರ ಮೆಗಾವಾಟ್ ಗಡಿ ದಾಟುವ ಮೂಲಕ ಕಳೆದ ದಶಕದಲ್ಲಿ ಗರಿಷ್ಠ ಪ್ರಮಾಣಕ್ಕೆ ಮುಟ್ಟಿದೆ. ಇದು ಮುಂದಿನ ದಿನಗಳಲ್ಲಿ ಲೋಡ್ಶೆಡ್ಡಿಂಗ್ಗೆ ಕಾರಣವಾಗಬಹುದು.
ಕಳೆದ ನಾಲ್ಕು ವರ್ಷಗಳ ಹಿಂದೆ ಬೇಸಿಗೆಯಲ್ಲಿ ರಾಜ್ಯದ ವಿದ್ಯುತ್ 14,200 ಮೆವಾಗೆ ತಲುಪಿದ್ದು, ಇದೇ ಗರಿಷ್ಠ ಬೇಡಿಕೆಯಾಗಿತ್ತು. ಕಳೆದೊಂದು ವಾರದಿಂದ ಬೇಡಿಕೆ 14 ಸಾವಿರ ಮೆಗಾ ಗಡಿ ದಾಟಿದ್ದು, ಶುಕ್ರವಾರ 14,674 ಮೆವಾಗೆ ಏರಿಕೆಯಾಗಿದೆ. ಈ ಕಾರಣಕ್ಕೆ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಒತ್ತಡ ಹೆಚ್ಚಾಗಿದೆ.
ಘಟಕದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾದಂತಹ ಅನಿವಾರ್ಯತೆ ಕೆಪಿಸಿಎಲ್ಗೆ ಎದುರಾಗಿದೆ. ಸೌರ-ಪವನ ಮೂಲಗಳಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ, ರಾತ್ರಿ ಸಮಯ ಬೇಡಿಕೆ ಸರಿದೂಗಿಸುವುದು ಸಮಸ್ಯೆಯಾಗಿದೆ.