2 ವರ್ಷದ ಮಗು ಮೇಲೆ ದೊಡ್ಡಪ್ಪನಿಂದಲೇ ಅತ್ಯಾಚಾರ: ಚನ್ನಪಟ್ಟಣದಲ್ಲಿ ಹೇಯ ಕೃತ್ಯ

Baby
Published on

ಚನ್ನಪಟ್ಟಣ: 2 ವರ್ಷದ ಕಂದಮ್ಮನ ಮೇಲೆ ಕಾಮುಕ ದೊಡ್ಡಪ್ಪನೇ ಅತ್ಯಾಚಾರವೆಸಗಿದ ಹೀನ ಕೃತ್ಯ ರಾಮನಗರ ಜಿಲ್ಲೆ ಚನ್ನಪಟ್ಟಣ ಪಟ್ಟಣದ ನಡೆದಿದೆ.

ಸಾದಿರ್(28) ಅತ್ಯಾಚಾರ ಆರೋಪಿ. ಗುರುವಾರ ಮಧ್ಯಾಹ್ನ ಸಹೋದರನ ಮನೆಗೆ ಬಂದ ಸಾದಿರ್​, ಚಾಕೋಲೇಟ್ ಕೊಡಿಸುವುದಾಗಿ ತನ್ನ ಮನೆಗೆ ಪುಟ್ಟ ಕಂದಮ್ಮನನ್ನು ಕರೆದುಕೊಂಡು ಹೋಗಿದ್ದ. ತಡರಾತ್ರಿ ಆದರೂ ಮಗುವನ್ನು ಮನೆಗೆ ಕರೆದುಕೊಂಡು ಬಂದಿರಲಿಲ್ಲ. ಆತನಿಗೆ ಕರೆ ಮಾಡಿದ ಪೋಷಕರು ಮಗು ಕರೆದುಕೊಂಡು ಬರುವಂತೆ ತಿಳಿಸಿದ್ದರು. 12 ಗಂಟೆ ಸುಮಾರಿಗೆ ವಾಪಸ್​ ಮಗುವನ್ನು ಆರೋಪಿ ಕರೆದುಕೊಂಡು ಬಂದಿದ್ದ.

ಮಗುವಿನ ಮೇಲೆ ರಕ್ತದ ಕಲೆ, ಗಾಯದ ಗುರುತುಗಳನ್ನು ನೋಡಿ ಗಾಬರಿಯಾದ ಪೋಷಕರು ಕೂಡಲೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆರೋಪಿಯನ್ನು ಚನ್ನಪಟ್ಟಣ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net