ರೌಡಿಶೀಟರ್​​ ಮದುವೆಯಲ್ಲಿ ಪಾಲ್ಗೊಂಡ ಪೊಲೀಸ್​ ಅಧಿಕಾರಿಗಳು!

police
Published on

ಕೊಪ್ಪಳ: ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ರೌಡಿ ಶೀಟರ್ ಮದುವೆಯಲ್ಲಿ ಮೂವರು ಪೊಲೀಸರು ಭಾಗಿಯಾಗಿದ್ದು, ಹಾರ ಹಾಕಿಸಿಕೊಂಡು ತೆಗೆಸಿಕೊಂಡ ಫೋಟೋಗಳು ಸಖತ್​ ವೈರಲ್​ ಆಗಿವೆ.

ಕೊಪ್ಪಳ ರೇಲ್ವೆ ನಿಲ್ದಾಣದ ಬಳಿ 2015ರ ಜನವರಿ 11ರಂದು ಯಲ್ಲಾಲಿಂಗನ ಹತ್ಯೆಯಾಗಿತ್ತು. ಕೊಲೆ ಪ್ರಕರಣದಲ್ಲಿ ಹನುಮೇಶ್ ನಾಯಕ್ ಮತ್ತು ಇವರ ಪುತ್ರ ಮಹಾಂತೇಶ ನಾಯಕ್​ ಸೇರಿ 9 ಜನ ಜೈಲಿಗೆ ಹೋಗಿದ್ದರು. ಜಾಮೀನು ಮೇರೆಗೆ ಇತ್ತೀಚಿಗೆ ಹೊರ ಬಂದಿದ್ದರು. ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಜು.18ರಂದು ಮಹಾಂತೇಶನ ಮದುವೆ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜಿನಕೊಪ್ಪ, ಸಿಪಿಐ ಉದಯರವಿ, ಪಿಎಸ್ಐ ತಾರಾಬಾಯಿ ರಾಠೋಡ ಅವರು ಪಾಲ್ಗೊಂಡಿದ್ದರು.

ಈ ವೇಳೆ ತೆಗೆಸಿಕೊಂಡಿದ್ದ ಫೋಟೋಗಳು ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಮದುವೆಯಲ್ಲಿ ಪಾಲ್ಗೊಂಡ ಮೂವರು ಅಧಿಕಾರಿಗಳನ್ನು ದೀರ್ಘಕಾಲಿಕ ಕಡ್ಡಾಯ ರಜೆ ಮೇಲೆ ಎಸ್ಪಿ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net