ಮಾತ್ರೆ ಕೊಟ್ಟು ಗಂಡನನ್ನು ಗಾಢ ನಿದ್ರೆಗೆ ತಳ್ಳಿದ ಪತ್ನಿ ನಂತರ ಎಸಗಿದ್ದು ಅಸಹ್ಯ ಕೃತ್ಯ!

arrest
Published on

ಮೈಸೂರು: ತನಗಿಂತ 20 ವರ್ಷ ದೊಡ್ಡವನಾದ ಗಂಡನಿಗೆ ನಿದ್ರೆ ಮಾತ್ರೆ ಕೊಟ್ಟು, ಆತನ ಮರ್ಮಾಂಗ ಹಿಚುಕಿ, ದಿಂಬಿನಿಂದ ಉಸಿರುಗಟ್ಟಿಸಿ ಪತ್ನಿಯೇ ಕೊಲೆ ಮಾಡಿದ್ದ ಪ್ರಕರಣ ಬರೋಬ್ಬರಿ 9 ತಿಂಗಳ ಬಳಿಕ ಬಯಲಾಗಿದ್ದು, ಕೊಲೆಗೆ ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಹುಣಸಗಳ್ಳಿ ಗ್ರಾಮದಲ್ಲಿ 9 ತಿಂಗಳ ಹಿಂದೆ ವೆಂಕಟರಾಮು ಎಂಬಾತ ಅನುಮಾನಾಸ್ಪವಾಗಿ ಮೃತಪಟ್ಟಿದ್ದ. ವೆಂಕಟರಾಮು ತಲೆ ಸುತ್ತು ಬಂದು ಸತ್ತು ಹೋಗಿದ್ದಾರೆ ಅಂತ ಮಾಹಿತಿ ಬಂದಿತ್ತು. ಆದರೆ, ಮೃತನ ಸಹೋದರ ಎಚ್.ಟಿ.ರವೀಂದ್ರ, ಬನ್ನೂರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಇದು ಸಹಜ ಸಾವಲ್ಲ, ಕೊಲೆ ಎಂಬ ರಹಸ್ಯ ಬಯಲಾಗಿತ್ತು. ಇದರ ಜಾಡು ಹಿಡಿದು ಹೊರ ಪೊಲೀಸರು ಕೊನೆಗೂ ನಿಗೂಢ ಕೊಲೆ ರಹಸ್ಯ ಪತ್ತೆ ಮಾಡಿದ್ದಾರೆ.

ವೆಂಕಟರಾಮುವನ್ನು ಕೊಂದವರು ಬೇರಾರೂ ಅಲ್ಲ, ಅವರ ಪತ್ನಿ ಉಮಾ ಮತ್ತು ಈಕೆಯ ಪ್ರಿಯಕರ ಅವಿನಾಶ್. ವೆಂಕಟರಾಮು ಮತ್ತು ಉಮಾ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಉಮಾಗಿಂತಲೂ ವೆಂಕಟರಾಮು 20 ವರ್ಷ ದೊಡ್ಡವರು. ಕ್ಷುಲ್ಲಕ ಕಾರಣಕ್ಕೆ ಗಂಡನ ಮನೆಯವರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಉಮಾ, ತವರು ಮನೆ ಸೇರಿದ್ದಳು. ಅಜ್ಜಿ ಮನೆಯಾದ ಹುಣಸಗಳ್ಳಿಯ ಹುಡುಗ ಅವಿನಾಶ್​ ಜತೆ ಲವ್ವಿ-ಡವ್ವಿ ಶುರು ಮಾಡಿದ್ಲು. ಪತಿಯನ್ನು ತನ್ನ ಅಜ್ಜಿಯ ಮನೆಗೆ ಕರೆಸಿಕೊಂಡಿದ್ದ ಉಮಾ, ಕಾಫಿಯಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದಳು. ನಿದ್ರೆ ಮಾಡುತ್ತಿದ್ದಾಗ ಮರ್ಮಾಂಗ ಹಿಚುಕಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.

ಕೊಲೆಯಾದ ವೆಂಕಟರಾಮುಗೆ 50 ವರ್ಷ. ಆರೋಪಿ ಉಮಾಗೆ 30 ವರ್ಷ ವಯಸ್ಸು. ಇಬ್ಬರ ನಡುವೆ 20 ವರ್ಷಗಳ ಅಂತರವಿದ್ದು, ಸಾಂಸಾರಿಕ ವಿರಸ ಇತ್ತು ಎನ್ನಲಾಗಿದೆ. ವಯಸ್ಸಿನ ಅಂತರವೇ ಕೊಲೆಗೆ ಪ್ರಮುಖ ಕಾರಣ ಅಂತ ಉಮಾ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ.

ಆರೋಪಿ ಉಮಾ ಮತ್ತು ಆಕೆಯ ಪ್ರಿಯಕರ ಅವಿನಾಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾಭಾವಿಕ ಸಾವು ಎಂಬಂತೆ ಮುಚ್ಚಿ ಹೋಗುತ್ತಿದ್ದ ಪ್ರಕರಣವೊಂದು ಪೋಸ್ಟ್​ ಮಾರ್ಟಮ್ ರಿಪೋರ್ಟ್​ನಿಂದ ಬಯಲಾಗಿದ್ದು ವಿಶೇಷ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net