ಒಂದು ಪ್ಲೇಟ್ ಫ್ರೆಂಚ್ ಫ್ರೈಸ್ ಬೆಲೆ 15,000 ರೂಪಾಯಿ: ಕಾರಣ ಕೇಳಿದ್ರೆ ಹುಬ್ಬೇರೋದು ಖಚಿತ​! French Fries

French Fries
Published on

French Fries : ಫ್ರೆಂಚ್ ಫ್ರೈಸ್... ಈ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತೆ. ರುಚಿ ರುಚಿಯಾದ ಈ ಖಾದ್ಯವನ್ನು ಇಷ್ಟಪಡದವರೇ ಇಲ್ಲ. ತುಂಬಾ ಬೇಡಿಕೆ ಸಹ ಇದೆ. ಒಂದು ಪ್ಲೇಟ್​ ಫ್ರೆಂಚ್​ ಫ್ರೈ ಹೆಚ್ಚೆಂದರೆ 100 ರಿಂದ 200 ರೂ.ವರೆಗೂ ಇದೆ. ಆದರೆ, ಜಗತ್ತಿನ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್ ಕೂಡ ಇದೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು.

ಹೌದು, ನ್ಯೂಯಾರ್ಕ್ ನಗರದ "ಸೆರೆಂಡಿಪಿಟಿ 3" ಎಂಬ ಕೆಫೆಯಲ್ಲಿ ತಯಾರಾಗುವ ಚೀಸೀ ಫ್ರೆಂಚ್ ಫ್ರೈಸ್ ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್ ಎಂಬ ಗಿನ್ನೆಸ್ ದಾಖಲೆಗೆ ಪಾತ್ರವಾಗಿದೆ. ಈ ಸೆರೆಂಡಿಪಿಟಿ 3 ರೆಸ್ಟೊರೆಂಟ್, ಅದಾಗಲೇ ಜಗತ್ತಿನ ಅತಿ ದುಬಾರಿ ಬರ್ಗರ್​ (295 ಡಾಲರ್) ಮತ್ತು ಅತಿ ದುಬಾರಿ ಐಸ್​ಕ್ರೀಂ ಸಂಡೇ(1000 ಡಾಲರ್)ಗಳನ್ನು ಮಾರುವ ತಾಣವಾಗಿದೆ.

ಇಲ್ಲಿ ಮಾರುವ ಫ್ರೆಂಚ್​ ಫ್ರೈಸ್​ ಬೆಲೆ ಪ್ರತಿ ಪ್ಲೇಟ್‌ಗೆ 200 ಡಾಲರ್​ (15,250 ರೂಪಾಯಿ). ಚಿಪ್ಪರ್​ಬೆಕ್​ ಆಲೂಗೆಡ್ಡೆಯಿಂದ ಮಾಡಿದ ‘ಕ್ರೀಮ್​ ಡೆ ಲಾ ಕ್ರೀಮ್​ ಪೊಮ್ಮೆಸ್ ಫ್ರೈಟ್ಸ್​’ ಎಂಬ ಹೆಸರಿನ ಈ ಫ್ರೆಂಚ್​ ಫ್ರೈಸ್​ ಮಾದರಿಯ ಡಿಶ್ಅನ್ನು​ ಗೂಸ್​ ಫ್ಯಾಟ್​ನಲ್ಲೇ ಕರಿಯುತ್ತಾರಂತೆ.

ಅಪರೂಪದ ಟ್ರಫಲ್ಸ್​ ಮಶ್ರೂಮ್ಸ್​ ತುಂಡುಗಳಿಂದ, ಟ್ರಫಲ್ಸ್​ ಸಾಲ್ಟ್​ ಮತ್ತು ಆಯಿಲ್​ನಿಂದ ಗಾರ್ನಿಶ್ ಮಾಡಿ, ನಂತರ ಎಡಿಬಲ್ ಗೋಲ್ಡ್​(ಚಿನ್ನ) ಸ್ಪ್ರಿಂಕಲ್ ಮಾಡಿ ಮಾರ್ನೇ ಚೀಸ್​ ಡಿಪ್​ನೊಂದಿಗೆ ತಿನ್ನಲು ನೀಡುತ್ತಾರಂತೆ! ಗಿನ್ನೀಸ್ ವರ್ಲ್ಡ್​ ರೆಕಾರ್ಡ್ಸ್​ನವರೇ ದೃಢೀಕರಿಸಿರುವಂತೆ ಭೂಮಿಯ ಮೇಲೆ ಸಿಗುವ ಅತ್ಯಂತ ದುಬಾರಿ ಫ್ರೈಸ್ ಇದಾಗಿದೆ.

ಆರೋಗ್ಯಕ್ಕೆ ಅಪಾಯಕಾರಿ

ಈ ಫ್ರೆಂಚ್​ ಫ್ರೈ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ದಿಢೀರನೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡುತ್ತದೆ ಮತ್ತು ಇದರಲ್ಲಿರುವ ಹೆಚ್ಚಿನ ಉಪ್ಪು ಮತ್ತು ಕೊಬ್ಬಿನಾಂಶವು ಹೃದಯಕ್ಕೆ ಅಪಾಯಕಾರಿಯಾಗಿವೆ. ಹೀಗಾಗಿ ಫ್ರೆಂಚ್​ ಫ್ರೈ ಅನ್ನು ಆದಷ್ಟು ನಿರ್ಲಕ್ಷಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net