ನ್ಯೂ ಇಯರ್​ ಸೆಲೆಬ್ರೇಷನ್​​ಗೆ ಕೇಕ್ ತರಲು ಬಂದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ​

cake
Published on

ಬಳ್ಳಾರಿ: 2023 ಕ್ಕೆ ವಿಧಾಯ ಹೇಳಿ 2024 ರ ಹೊಸ ವರ್ಷವನ್ನ ಭರ ಮಾಡಿಕೊಳ್ಳಲು ಹೊಸ ವರ್ಷದ ಆಚರಣೆಗಾಗಿ ಕೇಕ್ ತರಲು ಸಹೋದರರಿಬ್ಬರು ಹೋಗಿದ್ದ ವೇಳೆ ಬೇಕರಿಯೊಂದರ ಬಳಿ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಚಾಕು ಇರಿದು ಓರ್ವ ಕೊಲೆಯಾದ  ಘಟನೆ ಗಣಿನಾಡು ಬಳ್ಳಾರಿ ನಗರದ ವಡ್ಡರಬಂಡೆಯಲ್ಲಿ ನಡೆದಿದೆ.

cake
ಸಾಂದರ್ಭಿಕ ಚಿತ್ರ

ಸೈಯದುಲ್ಲಾ (24) ಮೃತಪಟ್ಟಿದ್ದು, ಮತ್ತೋರ್ವ ಬಾಪೂಜಿ ನಗರದ ನಿವಾಸಿ ರಜಾಕ್ ವಲಿ (26) ತೀವ್ರ ಗಾಯಗೊಂಡಿದ್ದು, ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಆರ್.ಕೆ.ಕಾಲೋನಿಯ ನಿವಾಸಿಗಳಾಗಿದ್ದಾರೆ.

birthday cake

ಕೇಕ್ ತರಲು ಹೋಗಿದ್ದ ವೇಳೆ ಪಾರ್ಕಿಂಗ್ ಮಾಡಿದ್ದ ಬೈಕ್ ಗೆ ಕೊಲೆಯಾದವರ ಬೈಕ್ ತಗುಲಿದ ಪರಿಣಾಮ ಪರಸ್ಪರ ಕೈ ಕೈ ಮಿಲಾಯಿಸುವ ಮೂಲಕ ಜಗಳ ತೀವ್ರ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.

ಮೃತಪಟ್ಟ ಸೈದುಲ್ಲಗೆ ಹೊಟ್ಟೆ ಭಾಗಕ್ಕೆ ತೀವ್ರವಾಗಿ ಚಾಕು ಇರಿದ ಪರಿಣಾಮ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದರೆ, ಇನ್ನೊರ್ವ ರಜಾಕ ಹೊಟ್ಟೆ, ಬೆನ್ನು, ಕೈ ಭಾಗಕ್ಕೆ ಚಾಕು ಇರಿತವಾಗಿದ್ದು ಆತನು ಸಾವು ಬದುಕಿನ ಮದ್ಯ ಹೋರಾಟ ಮಾಡುತ್ತಿದ್ದಾರೆ.

ಘಟನೆ ಸಂಬಂಧ ಬ್ರೂಸ್ ಪೇಟೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.ಆರೋಪಿ ರಾಜೇಶ್ ಎಂಬಾತನನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net