

ಕೊಪ್ಪಳ: ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿದ್ದು, 15 ನಿಮಿಷ ಕರಡಿ ಕಾದಾಡಿ ಆತ ಜೀವ ಉಳಿಸಿಕೊಂಡು ಬಂದಿರುವ ಘಟನೆ ನಡೆದಿದೆ.
ಕನಕಗಿರಿ ನಿವಾಸಿ ಭಾಷಾಸಾಬ್ ದಾಳಿಗೋಳಗಾದ ವ್ಯಕ್ತಿ. ಕನಕಗಿರಿ ಪಟ್ಟಣದ ಮದ್ಯದಲ್ಲಿ ಹಾದು ಹೋಗುವ ಹಳ್ಳದಲ್ಲಿ ಕರಡಿ ದಾಳಿ ನಡೆಸಿದೆ. ಕನಕಗಿರಿ ಪಟ್ಟಣದ 3ನೇ ವಾರ್ಡಿನಲ್ಲಿ ಗುರುವಾರ ಬೆಳಗಿನ ಜಾವ ನಡೆದ ಘಟನೆ.
ಜೀವ ರಕ್ಷಣೆಗೆ ಸುಮಾರು 15ನಿಮಿಷಗಳ ಕಾಲ ಕರಡಿಯೊಂದಿಗೆ ಸೆಣಸಾಡಿದ ಭಾಷಾಸಾಬ್ ಅವರಿಗೆ ಕರಡಿ ದಾಳಿಯಿಂದ ತಲೆಗೆ ಗಂಭೀರ ಗಾಯವಾಗಿದೆ. ಕನಕಗಿರಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಕರಡಿ ದಾಳಿಯಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.