VIDEO: ಇವರೆಂಥಾ ತಲೆಕೆಟ್ಟ ಮಂದಿ...! ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯ ನೋಡಿದರೆ ಭಯವಾಗದೆ ಇರದು

CCTV
Published on

ಬೆಂಗಳೂರು: ಮನಸಲ್ಲಿ ಎಷ್ಟು ಕ್ರೌರ್ಯ ತುಂಬಿದ ಜನರು ಇರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಬೆಂಗಳೂರಿನ ಶಂಕರನಗರದಲ್ಲಿ ನಡೆದ ಘಟನೆಯ ದೃಶ್ಯವನ್ನು ನೋಡಿದರೆ ಒಂದು ಕ್ಷಣ ನಡುಕ ಹುಟ್ಟದೆ ಇರದು.

ಶಂಕರೇಗೌಡ ಎಂಬುವರು ಕಾರಿಗೆ ಡೀಸೆಲ್​ ಹಾಕಿಸುತ್ತ ನಿಂತಿದ್ದರು. ಇದೇ ವೇಳೆ ಹಿಂದಿನಿಂದ ಸ್ವಿಫ್ಟ್​ ಕಾರಿನಲ್ಲಿ ಬಂದವರು ಒಂದೇ ಸಮ ಹಾರ್ನ್​ ಹೊಡೆದಿದ್ದಾರೆ. ಆಗ ಶಂಕರೇ​ ಗೌಡ ಅವರು ಹಿಂದೆ ತಿರುಗಿ, 'ಸರ್​..ಒಂದೇ ನಿಮಿಷ, ಕಾರು ತೆಗೆಯುತ್ತೇನೆ' ಎಂದಿದ್ದಾರೆ. ಆದರೂ ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಶಂಕರೇಗೌಡರ ಜತೆಗೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಅವರ ಮೇಲೆ ಕಾರು ಹತ್ತಿಸಲೂ ಮುಂದಾಗಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಶಂಕರೇಗೌಡ ಕಾರಿನ ಬ್ಯಾನೆಟ್​ ಮೇಲೆ ಜಂಪ್​ ಮಾಡಿದ್ದಾರೆ.

ಶಂಕರೇಗೌಡರು ಬ್ಯಾನೆಟ್ ಮೇಲೆ ಇದ್ದರೂ ಸಹ ಸ್ವಿಫ್ಟ್ ಕಾರಿನಲ್ಲಿದ್ದ ಪುಂಡರು ಅದೇ ಸ್ಥಿತಿಯಲ್ಲಿ ಕಾರನ್ನು ಚಲಾಯಿಸಿದ್ದಾರೆ. ಹಾಗೇ ಸ್ವಲ್ಪ ದೂರ ಕರೆದುಕೊಂಡು ಹೋಗಿ, ಅಲ್ಲೆಲ್ಲೋ ಮುಂದೆ ನಿಲ್ಲಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಂಕರೇಗೌಡರು ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net