

ಬೆಳಗಾವಿ: ಆಸ್ತಿ ವಿವಾದವೆಂಬುದು ಹತ್ಯೆಯೊಂದಕ್ಕೆ ಕಾರಣವಾಗಿದೆ. ಈ ಜಗಳದಲ್ಲಿ ಜೀವ ಕಳೆದುಕೊಂಡಿದ್ದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ.
ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜಾಪುರ ಗ್ರಾಮದಲ್ಲಿ. ಇಲ್ಲಿನ ತಾಪಂ ಮಾಜಿ ಸದಸ್ಯ ಚಿಂತಾಮಣಿ ಮೇಟಿ (60) ಮತ್ತು ಅವರ ಸಹೋದರನ ನಡುವೆ ಆಸ್ತಿ ವಿಚಾರಕ್ಕೆ ಜಗಳ ಶುರುವಾಗಿತ್ತು. ಈ ಜಗಳ ಮಿತಿಮೀರಿ, ಚಿಂತಾಮಣಿ ಮೇಟಿ ಅವರನ್ನು ಅವರ ಸಹೋದರ ಗೋಪಾಲ್ ಹತ್ಯೆ ಮಾಡಿದ್ದಾನೆ.
ಚಿಂತಾಮಣಿ ಅವರ ಮನೆಗೇ ಹೋದ ಗೋಪಾಲ್ ಗುಂಡು ಹಾರಿಸಿ ಕೊಂದಿದ್ದಾನೆ. ಅದಾದ ಬಳಿಕ ಸೀದಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.