ಕನ್ಹಯ್ಯರ ಹತ್ಯೆ ಪ್ರಕರಣ ಖಂಡಿಸುತ್ತಲೇ ಸರ್ಕಾರವನ್ನ ಎಚ್ಚರಿಸಿದ ಪೇಜಾವರ ಶ್ರೀ

Vishwaprasanna thirtha swamiji 21 FEB 20
Published on

ಉಡುಪಿ: ಜನರ ರಕ್ಷಣೆ ಹೊಣೆ ಸರ್ಕಾರದ್ದು. ಅನಾಗರಿಕ ಪ್ರವೃತ್ತಿಯ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಾರ್ವಜನಿಕರು ಯಾವುದೇ ಭಯವಿಲ್ಲದೆ ಮುಕ್ತ ವಾತಾವರಣದಲ್ಲಿ ಬದುಕುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್​ರ ಹತ್ಯೆ ಖಂಡಿಸಿ 'ವಿಜಯವಾಣಿ' ಜತೆ ಮಾತನಾಡಿದ ಶ್ರೀಗಳು, ಕನ್ಹಯ್ಯರ ಹತ್ಯೆ ಪ್ರಕರಣ ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ. ಸಂವಿಧಾನಬದ್ಧವಾದ ನಾಗರಿಕ ಸಮಾಜದಲ್ಲಿ ಅನಾಗರಿಕರು ಪ್ರವೇಶ ಮಾಡಿ ಅನ್ಯಾಯ ಎಸಗದಂತೆ ಚುನಾಯಿತ ಸರ್ಕಾರಗಳು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net