ಕೆಂಪು ಕಣ್ಣು, ಬಿಳಿ ಬಣ್ಣ.... ಇದುವರೆಗೂ ಕರ್ನಾಟಕದಲ್ಲಿ ಕಾಣಸಿಕೊಳ್ಳದ ಅಪರೂಪದ ಹಾವು ಇದು! Rare Snake

Rare Snake
Published on

Rare Snake : ಇಂದಿಗೂ ಕರ್ನಾಟಕ ಮತ್ತು ಕೇರಳದಲ್ಲಿ ಕಾಣಸಿಗದ ಮುತ್ತಿನ ಬಿಳಿ ಬಣ್ಣ ಹಾಗೂ ಕೆಂಪು ಕಣ್ಣಿನ ಅಪರೂಪದ ಹಾವು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಕೇರಳದ ಖ್ಯಾತ ಉರಗ ರಕ್ಷಕ ವಾವಾ ಸುರೇಶ್​ ಅವರು ತಮ್ಮ ಸ್ನೇಹಿತರ ಜತೆಗೂಡಿ ಅಪರೂಪದ ಹಾವನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ರಕ್ಷಣೆ ಮಾಡಿದ್ದಾರೆ.

ವಾವಾ ಸುರೇಶ್​ ಅವರ ಸ್ನೇಹಿತ ನವೀನ್ ರಾಖಿ ಮತ್ತು ಅಭಿಜಿತ್​ ಎಂಬುವರು ಅಮರಾವತಿಯಲ್ಲಿ ಹಾವು ರಕ್ಷಣೆ ಮಾಡುವ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಮೇಕೆಯ ಬೋನಿನಲ್ಲಿ ಬಿಳಿ ಬಣ್ಣದ ಹಾವು ಕಂಡಿರುವುದಾಗಿ ಅಭಿಜಿತ್‌ ಅವರಿಗೆ ಕರೆ ಒಂದು ಬಂದಿತ್ತು. ಅಭಿಜಿತ್ ಕೂಡಲೇ ನವೀನ್​ಗೆ ಮಾಹಿತಿ ನೀಡಿದರು.

ಮಾಹಿತಿ ಸಿಗುತ್ತಿದ್ದಂತೆ ನವೀನ್ ಮತ್ತು ವಾವಾ ಸುರೇಶ್ ಸ್ಥಳಕ್ಕೆ ತಲುಪಿದರು. ಇದೇ ಸಂದರ್ಭದಲ್ಲಿ ಅಭಿಜಿತ್ ಅವರು ಬೇರೆ ಕಡೆಯಲ್ಲಿ ಸಿಕ್ಕ ‘ಕುಕ್ರಿ’ ಹಾವಿನೊಂದಿಗೆ ಸ್ಥಳಕ್ಕೆ ಬಂದರು. ಆ ಹಾವನ್ನು ವಾವಾ ಸುರೇಶ್ ಅವರು ನೋಡಿದಾಗ ಅದು ನಮ್ಮ ದೇಶದ ಚುರ್ತಾ ಎಂಬ ಹಾವು. ಇದನ್ನು ಕರ್ನಾಟಕದಲ್ಲಿ 'ಕಾಮನ್ ಕುಕ್ರಿ' ಎಂದೂ ಕರೆಯುತ್ತಾರೆ.

ಬಳಿಕ ಮೂವರು ಸೇರಿ ಫೋನ್​ ಕರೆ ಬಂದ ಹಳ್ಳಿಯ ಕಡೆ ಹೋಗುತ್ತಾರೆ. ಅವರನ್ನು ಕಂಡ ಗ್ರಾಮಸ್ಥರು ಕೂಡ ಸ್ಥಳದಲ್ಲಿ ಜಮಾಯಿಸುತ್ತಾರೆ. ಮನೆಯೊಂದರ ಕುರಿದೊಡ್ಡಿಯಲ್ಲಿ ಮೂವರು ಹುಡುಕಾಡುವಾಗ ಹಾವೊಂದು ಕಾಣಿಸಿಕೊಳ್ಳುತ್ತದೆ.

ಕೆಂಪು ಕಣ್ಣು, ಬಿಳಿ ಬಣ್ಣದ ಹಾವನ್ನು ಕಂಡು ವಾವಾ ಸುರೇಶ್​ ಮುಖದಲ್ಲಿ ಸಂತಸ ಮೂಡುತ್ತದೆ. ಏಕೆಂದರೆ, ಕೇರಳ ಹಾಗೂ ಕರ್ನಾಟಕದಲ್ಲಿ ಇಂತಹ ಹಾವು ಇದುವರೆಗೂ ಕಾಣಿಸಿಕೊಂಡಿಯೇ ಇಲ್ಲ. ಹೀಗಾಗಿ ಅಪರೂಪದ ಹಾವು ನೋಡಿ ಮಂತ್ರಮುಗ್ಧರಾಗುತ್ತಾರೆ. ಮೊದಲ ಬಾರಿಗೆ ಆ ಹಾವನ್ನು ಹಿಡಿದು ಖುಷಿ ಪಡುತ್ತಾರೆ. ಅಷ್ಟಕ್ಕೂ ಆ ಹಾವು ಯಾವುದೆಂದೆರೆ, ಅದೊಂದು ಅಲ್ಬಿನೋ ಹಾವು. ಇದುವರೆಗೆ ಕರ್ನಾಟಕದಿಂದ ಈ ಜಾತಿಯ ಹಾವು ಪತ್ತೆಯಾಗಿಲ್ಲ ಎನ್ನುತ್ತಾರೆ ನವೀನ್ ರಾಖಿ ಮತ್ತು ವಾವಾ ಸುರೇಶ್​. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net