ಹಳೇ ಪ್ರೇಯಸಿಗೆ ಮಚ್ಚಿನಿಂದ ಹೊಡೆದು ಹೋದವ ಶವವಾದ...

Crime Scene 27 May 20
Published on

ರಾಮನಗರ: ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿಶಾಲ್​ ಮಾರ್ಟ್​ ಬಳಿ ಪ್ರೇಯಸಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಸೈಕೋ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿತ್ಯಶ್ರೀ ಹಾಗೂ ಗಿರೀಶ್​ ಕಾಲೇಜು ದಿನಗಳಿಂದ ಪ್ರೀತಿಸುತ್ತಿದ್ದು, ಬಳಿಕ ಭಿನ್ನಾಭಿಪ್ರಾಯ ಮೂಡಿ ಬೇರೆಯಾಗಿದ್ದರು. ಇತ್ತೀಚೆಗೆ ಗಿರೀಶ್​ ನಿತ್ಯಶ್ರೀ ಮನೆ ಬಳಿಬಂದು ಮದುವೆಯಾಗು ಎಂದು ಕಾಡುತ್ತಿದ್ದ. ಆಕೆ ನಿರಾಕರಿಸುತ್ತಲೇ ಬಂದಿದ್ದಳು. ಈಗ ನಿತ್ಯಶ್ರೀಗೆ ಬೇರೆಯವನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇಂದು ಆಕೆ ಶಾಪಿಂಗ್​ಗೆ ಹೋದಾಗ ಗಿರೀಶ್​ ಮಚ್ಚಿನಿಂದ ತೀವ್ರ ಹಲ್ಲೆ ನಡೆಸಿ ಪರಾರಿಯಾಗಿದ್ದ.

ಇದೀಗ ತಾವರೆಕೆರೆ ಪೊಲೀಸ್​ ಠಾಣೆ ವ್ಯಾಪ್ತಿಯ ಗಾಣಕಲ್​ ಪೆದ್ದಪ್ಪನಪಾಳ್ಯ ರಸ್ತೆಯಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಆತನ ಮೃತದೇಹ ರವಾನೆಯಾಗಿದೆ. ಪ್ರಕರಣ ದಾಖಲಾಗಿದೆ. (ದಿಗ್ವಿಜಯನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net