

ಭೋಪಾಲ್: ಶಾಲೆಯ ಆನ್ಲೈನ್ ತರಗತಿ ನಡೆಯುತ್ತಿದ್ದಾಗ ಮೊಬೈಲ್ ಫೋನ್ ಸ್ಫೋಟಗೊಂಡು ಮಧ್ಯಪ್ರದೇಶದ 15 ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದಾನೆ.
ಗುರುವಾರ ಮಧ್ಯಾಹ್ನ ಸತ್ನಾ ಜಿಲ್ಲೆಯ ಚಾಂಕುಯ್ಯ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪಾಲಕರು ಕೆಲಸಕ್ಕೆ ಹೋಗಿದ್ದರು. ಮನೆಯಲ್ಲೇ ಇದ್ದ ಎಂಟನೇ ತರಗತಿಯ ವಿದ್ಯಾರ್ಥಿಯಾದ ರಾಮಪ್ರಕಾಶ್ ಭದೌರಿ ಆನ್ಲೈನ್ ಕ್ಲಾಸ್ ಅಟೆಂಟ್ ಮಾಡಿದ್ದ.
ಈ ವೇಳೆ ಮೊಬೈಲ್ ಸ್ಫೋಟಗೊಂಡಿದ್ದು, ಬಾಲಕನ ದವಡೆಗೆ ಗಾಯವಾಗಿದೆ. ಸ್ಫೋಟದ ಶಬ್ದ ಕೇಳಿದ ಅಕ್ಕಪಕ್ಕದವರು ಬಾಲಕನ ಮನೆಗೆ ಧಾವಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.