

ಆಂಧ್ರಪ್ರದೇಶ: 'ಪುಷ್ಪಾ 1: ದಿ ರೈಸ್' ಸಿನಿಮಾ ಕಂಡ ದೊಡ್ಡ ಯಶಸ್ಸಿನ ನಂತರ ಚಿತ್ರದ ಪಾರ್ಟ್ 2 ಬಗ್ಗೆ ಐಕಾನ್ ಸ್ಟಾರ್, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳಿಂದ ಭಾರೀ ಕುತೂಹಲ ಮತ್ತು ನಿರೀಕ್ಷೆಗಳು ವ್ಯಕ್ತವಾಗಿತ್ತು. ಚಿತ್ರದ ಕುರಿತು ಮಾಹಿತಿಗಾಗಿ ಕಾಯುತ್ತಿದ್ದ ಫ್ಯಾನ್ಸ್ಗೆ ಇದೀಗ ಹೊಸ ಅಪ್ಡೇಟ್ವೊಂದು ಲಭಿಸಿದೆ.
ಕ್ರಿಯೇಟಿವ್ ಮಾಸ್ಟರ್‌ಮೈಂಡ್, ನಿರ್ದೇಶಕ ಸುಕುಮಾರ್ ನಿರ್ದೇಶಿಸಿರುವ ಪುಷ್ಪಾ 2: ದಿ ರೂಲ್ ಚಿತ್ರದ ಚಿತ್ರೀಕರಣವು ನಿರೀಕ್ಷಿಸಿದ ಅವಧಿಯೊಳಗೆ ಪೂರ್ಣಗೊಂಡಿಲ್ಲ. ಇಲ್ಲಿಯವರೆಗೂ ಕೇವಲ 30-40 ಪ್ರತಿಶತದಷ್ಟು ಮಾತ್ರ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಶೂಟಿಂಗ್ ಪೂರ್ಣಗೊಳಿಸಲು ಇನ್ನೂ ಹಲವಾರು ತಿಂಗಳುಗಳ ಅಗತ್ಯವಿದೆ ಎಂದು ವರದಿಗಳು ತಿಳಿಸಿವೆ. ಸದ್ಯ ಈ ಸಂಗತಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ.
ಚಿತ್ರದಲ್ಲಿ ಅಲ್ಲು ಅರ್ಜುನ್ಗೆ ನಾಯಕಿಯಾಗಿ ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಫಹದ್ ಫಾಸಿಲ್, ಸುನಿಲ್, ಅನಸೂಯಾ ಭಾರದ್ವಾಜ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).