

ಆಂಧ್ರಪ್ರದೇಶ: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ 'ಗುಂಟೂರು ಕಾರಂ' ಮುಂಬರುವ ಸಂಕ್ರಾಂತಿ ಹಬ್ಬಕ್ಕೆ ತೆರೆ ಮೇಲೆ ಹಾಜರಾಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ.
ಸದ್ಯ ಸಿನಿಮಾ ಕುರಿತಂತೆ ಹೊಚ್ಚ ಹೊಸ ಅಪ್ಡೇಟ್ಗಳ ಬಗ್ಗೆ ಭಾರೀ ಕುತೂಹಲದಿಂದ ಕಾಯುತ್ತಿರುವ ಮಹೇಶ್ ಅಭಿಮಾನಿಗಳಿಗೆ ಇದೀಗ ಚಿತ್ರ ತಯಾರಕರಿಂದ ಹೊಸ ಸುದ್ದಿ ಪ್ರಕಟವಾಗಿದೆ.
'ಗುಂಟೂರು ಕಾರಂ' ಚಿತ್ರದ ಚಿತ್ರೀಕರಣ ಸದ್ಯ ಭರದಿಂದ ಸಾಗುತ್ತಿದ್ದು, ಇದರ ಮಧ್ಯೆ ಚಿತ್ರತಂಡ ಸಿನಿಮಾದ ಮೊದಲ ಸಿಂಗಲ್ ಬಿಡುಗಡೆಗೆ ಮುಂದಾಗಿದೆ. ನವೆಂಬರ್ 7 ರಂದು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಹುಟ್ಟುಹಬ್ಬದಂದು ಹಾಡು ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.
ಚಿತ್ರದಲ್ಲಿ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಜಗಪತಿ ಬಾಬು, ಪ್ರಕಾಶ್ ರಾಜ್, ರಮ್ಯಾ ಕೃಷ್ಣ ರಾಹುಲ್ ರವೀಂದ್ರನ್, ಬ್ರಹ್ಮಾನಂದಂ ಮುಂತಾದವರ ತಾರಾಗಣವಿದೆ. ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್. ರಾಧಾ ಕೃಷ್ಣ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಎಸ್.ಎಸ್. ಥಮನ್ ಅವರ ಸಂಗೀತ ಸಂಯೋಜಯಿದೆ,(ಏಜೆನ್ಸೀಸ್).