ಈ ವಾರ ರಿಲೀಸ್​ ಆಗಲಿದೆ ಶಾರೂಖ್​ ಖಾನ್​ ನಟನೆಯ 'ಜವಾನ್' ಚಿತ್ರದ ಹೊಸ ಟ್ರೇಲರ್?​

Untitled design (24)
Published on

ಮುಂಬೈ: ಬಾಲಿವುಡ್​ನ​ ಕಿಂಗ್​ ಖಾನ್​, ನಟ ಶಾರೂಖ್​ ಖಾನ್​ ಅಭಿನಯದ ಬಹುನಿರೀಕ್ಷಿತ 'ಜವಾನ್' ಚಿತ್ರವು ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಮೂಡಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಿನಿಮಾದ ಹೊಸ ಟ್ರೇಲರ್​ ಬಿಡುಗಡೆಯಾಗಲಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿದೆ.

ಈಗಾಗಲೇ ಚಿತ್ರಕ್ಕೆ ಸಾಕಷ್ಟು ಭರವಸೆ ಮತ್ತು ನಿರೀಕ್ಷೆಗಳು ಲಭಿಸಿದ್ದು, ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯತೊಡಗಿದ್ದಾರೆ. ಈ ಹಿಂದೆ 'ಜವಾನ್'​ ಚಿತ್ರತಂಡವು ಸಿನಿಮಾದ ಒಂದೆರಡು ಹಾಡುಗಳನ್ನು ಯೂಟ್ಯೂಬ್​ ಮತ್ತು ಲೈವ್​ ಸ್ಟ್ರೀಮ್ಸ್​ನಲ್ಲಿ ರಿಲೀಸ್​ ಮಾಡಿತ್ತು. ಎರಡು ಸಾಂಗ್​ ವೀಕ್ಷಿಸಿದ ಸಿನಿಪ್ರೇಕ್ಷಕರು, ಕಮೆಂಟ್​ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರ ವೀಕ್ಷಣೆಗೆ ಈಗಾಗಲೇ ಮುಂಗಡ ಬುಕ್ಕಿಂಗ್‌ಗಳು ಕೂಡ ಪ್ರಾರಂಭವಾಗಿದೆ.

ಈ ಮಧ್ಯೆ ಇತ್ತೀಚಿನ ವದಂತಿಗಳ ಪ್ರಕಾರ, ಜವಾನ್​ ಚಿತ್ರದ ಹೊಸ ಟ್ರೇಲರ್​ ಅನ್ನು ಬಿಡುಗಡೆಗೊಳಿಸಲು ಚಿತ್ರತಂಡ ಸಜ್ಜಾಗಿದೆ ಎಂದು ಹೇಳಲಾಗಿದೆ. ಆದ್ರೆ, ಈ ಬಗ್ಗೆ ಚಿತ್ರ ತಯಾರಕರಿಂದ ಯಾವುದೇ ಅಧಿಕೃತ ಮಾಹಿತಿಯೂ ಹೊರಬಂದಿಲ್ಲ. ಚಿತ್ರದಲ್ಲಿ ಶಾರೂಖ್​ಗೆ ನಾಯಕಿಯಾಗಿ ನಟಿ ನಯನತಾರಾ ಅಭಿನಯಿಸಿದ್ದಾರೆ. ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು, ಸುನಿಲ್ ಗ್ರೋವರ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net