ಉಷಾ ನರ್ಸಿಂಗ್ ಹೋಂ ವೃತ್ತಕ್ಕೆ ಹೊಸ ಸ್ಪರ್ಶ

byr visit
ಬಿ.ವೈ.ರಾಘವೇಂದ್ರ ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆ ಬಳಿ ಸರ್ವೀಸ್ ರಸ್ತೆ ಅಭಿವೃದ್ಧಿ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೈಸೂರು ನೈಋತ್ಯ ರೈಲ್ವೆ ಡೆಪ್ಯೂಟಿ ಚೀಫ್ ಇಂಜಿನಿಯರ್ ಪ್ರದೀಪ್ ಪುರಿ, ಹಿರಿಯ ಅಧಿಕಾರಿಗಳಾದ ಮೂರ್ತಿರಾಜು, ವೂಟನ್, ಹರ್ಷವರ್ಧನ್, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್,
Published on

ಶಿವಮೊಗ್ಗ: ಸವಳಂಗ ರಸ್ತೆ ಹಾಗೂ ಕಾಶಿಪುರದಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆಗಳಲ್ಲಿ 20 ಕಿ.ಮೀ ವೇಗದಲ್ಲಿ ಸಾಗಿದರೂ ಕಿರಿಕಿರಿಯಾಗುತ್ತದೆ. ರಸ್ತೆಯ ಮೇಲ್ಮೈ ಸರಿಯಿಲ್ಲ. ಈ ಲೋಪವನ್ನು ಸರಿಪಡಿಸಿ ಎಂದು ಅಧಿಕಾರಿಗಳಿಗೆ ಬಿ.ವೈ.ರಾಘವೇಂದ್ರ ಸೂಚಿಸಿದರು.

ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಅಧಿಕಾರಿಗಳ ನಿಯೋಗದೊಂದಿಗೆ ಸವಳಂಗ ರಸ್ತೆ ಮೇಲ್ಸೇತುವೆ ಪರಿಶೀಲಿಸಿದ ಅವರು, ಆ ಭಾಗದಲ್ಲಿ ತ್ವರಿತವಾಗಿ ಸರ್ವೀಸ್ ರಸ್ತೆ ನಿರ್ಮಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು. ಕುಡಿಯುವ ನೀರಿನ ಪೈಪ್, ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕು ಎಂದು ಹೇಳಿದರು.
ಉಷಾ ನರ್ಸಿಂಗ್ ಹೋಂ ವೃತ್ತವನ್ನು ಆಕರ್ಷಣೀಯವಾಗಿ ಅಭಿವೃದ್ಧಿಪಡಿಸಬೇಕು. ಇದನ್ನು ಪಾಲಿಕೆಗೆ ಹಸ್ತಾಂತರಿಸಿ ಪಾಲಿಕೆಯಿಂದೇ ಅಭಿವೃದ್ಧಿ ಕಾಮಗಾರಿ ನಡೆಸಲಿ. ಅದಕ್ಕೆ ಪೂರಕವಾಗಿ ರೈಲ್ವೆ ಇಲಾಖೆ ತನ್ನ ಪಾಲಿನ ಹಣವನ್ನು ಪಾಲಿಕೆಗೆ ನೀಡಲಿ ಎಂದು ಬಿವೈಆರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net