ಹೈಕೋರ್ಟ್ ಕಲಾಪಕ್ಕೆ ಹೊಸ ವೇದಿಕೆ

highcourt
Published on

ಬೆಂಗಳೂರು: ವಿಕನ್ಸೋಲ್ ವೇದಿಕೆಯ ಮೂಲಕ ಹೈಕೋರ್ಟ್ ಇನ್ನು ಮುಂದೆ ತನ್ನೆಲ್ಲ ವಿಡಿಯೋ ಕಾನ್ಫರೆನ್ಸಿಂಗ್ ಕಲಾಪಗಳನ್ನು ನಡೆಸಲಿದೆ.

ಬೆಂಗಳೂರಿನ ಪ್ರಧಾನಪೀಠ ಹಾಗೂ ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿನ  ನ್ಯಾಯಾಲಯಗಳ ವಿಡಿಯೋ ಕಾನ್ಫರೆನ್ಸಿಂಗ್ ಸೋಮವಾರದಿಂದ ಹಾಲಿ ಇರುವ ಝೂಮ್ ಫ್ಲಾಟ್ ಫಾರಂಗೆ ಬದಲಾಗಿ ವಿಕನ್ಸೋಲ್ ಫ್ಲಾಟ್ ಫಾರಂನಡಿ ನಡೆಯಲಿವೆ.

ಪ್ರಾಯೋಗಿಕ ವಿಕನ್ಸೋಲ್ ಫ್ಲಾಟ್ ಫಾರಂ ಅನ್ನು ಧಾರವಾಡ ಪೀಠದಲ್ಲಿ ಜಾರಿಗೊಳಿಸಲಾಗಿತ್ತು. ಅದರ ಸಾಧಕ- ಬಾಧಕ ಪರಿಶೀಲಿಸಿದ ಬಳಿಕ ಇದೀಗ ಎ್ಲ ನ್ಯಾಯಾಲಯಗಳಿಗೂ ವಿಸ್ತರಿಸಲಾಗಿದೆ.

ವಕೀಲರು, ಕಕ್ಷಿದಾರರು, ಸರ್ಕಾರಿ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಕೋರ್ಟ್ ಕಲಾಪಗಳನ್ನು ವೀಕ್ಷಿಸಲು ಮತ್ತು ಅದರಲ್ಲಿ ಭಾಗಿಯಾಗಲು ಹೊಸ ವಿಕನ್ಸೋಲ್ ವೇದಿಕೆಯಲ್ಲಿ ಹೇಗೆ ನೋಂದಾಯಿಸಿಕೊಳ್ಳಬೇಕೆಂಬ ಬಗ್ಗೆ ಕೈಪಿಡಿ ಬಿಡುಗಡೆ ಮಾಡಲಾಗಿದ್ದು, ಹೈಕೋರ್ಟ್‌ನ ವೆಬ್ಸೈಟ್‌ನಲ್ಲಿ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net