ವಿದ್ಯಾಭಾರತೀ ಭವನಕ್ಕೆ ಹೊಸರೂಪ

brahmana
ಶೃಂಗೇರಿಯ ರಾಜನಗರದಲ್ಲಿ ಆಯೋಜಿಸಿದ್ದ ತಾಲೂಕು ಬ್ರಾಹ್ಮಣ ಮಹಾಸಭಾದ ಸರ್ವ ಸದಸ್ಯರ ಸಭೆಯಲ್ಲಿ ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ ಅವರನ್ನು ಸನ್ಮಾನಿಸಲಾಯಿತು. ಕವನಾ ಶ್ಯಾಮ್ ಸುಂದರ್, ಎಂ.ಎಲ್.ಪ್ರಕಾಶ್, ಬಂಡ್ಲಾಪುರ ಶ್ರೀಧರ್ ರಾವ್, ರಾಮಣ್ಣಯ್ಯ ಇದ್ದರು.
Published on

ಶೃಂಗೇರಿ: ಸಮುದಾಯದ ಸಂಘಟನೆ ಕಾರ್ಯ ನಿರಂತರ ಪ್ರಕ್ರಿಯೆ. ಹೊಸ ಯೋಜನೆಗಳಿಗೆ ಸದಾ ಪ್ರೋತ್ಸಾಹ ಇರಲಿದೆ. ಪ್ರಸ್ತುತ ಸಮುದಾಯದ ವಿದ್ಯಾಭಾರತೀ ಭವನಕ್ಕೆ ಹೊಸರೂಪ ನೀಡಲಾಗಿದೆ ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್ ತಿಳಿಸಿದರು.
ರಾಜನಗರದ ವಿದ್ಯಾಭಾರತೀ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಬ್ರಾಹ್ಮಣ ಮಹಾಸಭಾದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದರು.
ಸಂಘಟನೆಗಳು ಸದೃಢಗೊಳ್ಳಲು ಮಹಾಸಭಾ ಪದಾಧಿಕಾರಿಗಳು ಒಗ್ಗೂಡಬೇಕು. ವಿದ್ಯಾನಿಧಿ ಯೋಜನೆ ಮೂಲಕ ಕಳೆದ ಬಾರಿ 15 ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ. ಈ ಯೋಜನೆ ನಿರಂತರ ಮುಂದುವರಿಯಲಿದೆ. ಈ ಬಾರಿ ನ.23ರಿಂದ ಡಿ.3ರವರೆಗೆ ಬೆಂಗಳೂರಿನ ಪಾಂಡುರಂಗ ನಾಮಸಂಕೀರ್ತನಾ ಮಂಡಳಿ, ಶ್ರೀ ಸೀತಾರಾಮ ಮಹಾ ಸಾಮ್ರಾಜ್ಯ ಪಟ್ಟಾಭಿಷೇಕಂ, ಚತುರ್ವೇದ ಪಾರಾಯಣ, 1008 ಸುವಾಸಿನಿಯರ ಪೂಜೆ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಗದ್ಗುರುಗಳ ಅನುಗ್ರಹದಿಂದ ಸಮುದಾಯವು ಸತ್ಕಾರ್ಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಂಘವು ಸಮಾಜದ ಶ್ರೇಯಸ್ಸಿಗಾಗಿ ತನ್ನದೇ ಆದ ಕೊಡುಗೆ ನೀಡಲಿದೆ ಎಂದರು.
ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ ಅವರನ್ನು ಗೌರವಿಸಲಾಯಿತು. ಮಹಾಸಭಾ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಎಲ್.ರವಿಕುಮಾರ್, ಉಪಾಧ್ಯಕ್ಷರಾದ ಮಹಾಬಲ ಭೀಡೆ, ನಾಗಭೂಷಣ್ ರಾವ್, ಕೋಶಾಧ್ಯಕ್ಷ ಸುಧೀಂದ್ರ, ಮಾಜಿ ಅಧ್ಯಕ್ಷ ಎಂ.ಎಸ್.ರಂಗನಾಥ್, ಹೆಬ್ಬಾರ್ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀಧರ್ ಅಣ್ಣುಕೊಡಿಗೆ, ಕೂಟ ಮಹಾಜಗತ್ತು ಅಧ್ಯಕ್ಷ ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net