ಹೊಸ ಕೋವಿಡ್ ರೂಪಾಂತರಿ 'ಎರಿಸ್'; ಇಂಗ್ಲೆಂಡ್​ನಲ್ಲಿ ವೇಗವಾಗಿ ಹಬ್ಬುತ್ತಿದೆ ಈ ಸೋಂಕು!

Untitled design - 2023-08-07T160732.102
Published on

ಯುನೈಟೆಡ್​ ಕಿಂಗ್​ಡಮ್​: ಕೋವಿಡ್​ ಹೆಸರು ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದು, 'ಎರಿಸ್'​ ಎಂಬ ಹೊಸ ರೂಪಾಂತರಿ ಜುಲೈ 3 ರಂದು ಇಂಗ್ಲೆಂಡ್ ದೇಶದಲ್ಲಿ ಪತ್ತೆಯಾಗಿತ್ತು. ಈ ಸೋಂಕು ಈಗ ದೃಢವಾಗಿದ್ದು, ವ್ಯಾಪಕವಾಗಿ ಹಬ್ಬುತ್ತಿದೆ. ಸದ್ಯ ಇದರಿಂದ ಆರೋಗ್ಯ ಅಧಿಕಾರಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ.

ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ನೀಡಿದ ಮಾಹಿತಿ ಪ್ರಕಾರ, ಎರಿಸ್ ಎಂದು ಹೆಸರು ಹೊಂದಿರುವ ಇಜಿ.5.1, ಏಳು ಹೊಸ ಕೋವಿಡ್ ಪ್ರಕರಣಗಳಲ್ಲಿ ಇದು ಒಂದು ಎಂದು ಹೇಳಲಾಗಿದೆ. ಎರಿಸ್ ಅನ್ನು ಜುಲೈ 31 ರಂದು ಒಂದು ರೂಪಾಂತರಿ ಎಂದು ವರ್ಗೀಕರಿಸಲಾಗಿದೆ.

ಎರಿಸ್ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಮೂಗು ಸೋರುವಿಕೆ, ಗಂಟಲು ಬೇನೆ, ತಲೆನೋವು, ಆಯಾಸ ಮತ್ತು ಶೀತದಂತ ರೋಗಲಕ್ಷಣಗಳು ಕಂಡುಬರುತ್ತದೆ. ಇಂಗ್ಲೆಂಡ್ನಲ್ಲಿ ಕೋವಿಡ್​-19 ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆಯಾದ ಬೆನ್ನಲ್ಲೇ ರೋಗಲಕ್ಷಣಗಳು ಕಾಣಿಸಿಕೊಂಡ ಎಲ್ಲಾ ವಯೋಮಾನದ ಜನರನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.

ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ವಿಶ್ವದ ದೇಶಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net