More

    ಚಂಡಮಾರುತ ಪರಿಣಾಮ ‘ಮರೆವು’, ತುರ್ತು ಕಾಮಗಾರಿಗೆ ಸಲ್ಲಿಕೆಯಾದ ಪ್ರಸ್ತಾವನೆ ನನೆಗುದಿಗೆ

    ಹರೀಶ್ ಮೋಟುಕಾನ ಮಂಗಳೂರು

    ‘ಚಂಡಮಾರುತ’ ಬಂದು ಹೋಗುವವರೆಗೆ ಮಾತ್ರ ಸುದ್ದಿಯಲ್ಲಿರುತ್ತದೆ. ಇದರಿಂದ ಆಗಿರುವ ಹಾನಿಯ ದುರಸ್ತಿ ವಿಷಯ ಕೂಡ ಅದೇ ಕಾಲಕ್ಕೆ ಮರೆತು ಹೋಗುತ್ತದೆ. ಇದೇ ಕಾರಣದಿಂದ 2018ರಿಂದ ಇಲ್ಲಿಯವರೆಗೆ ನಡೆದ ಚಂಡಮಾರುತದಿಂದ ಆಗಿರುವ ಕೆಲವು ಭಾಗದ ಹಾನಿಯ ದುರಸ್ತಿ ಕಾರ್ಯ ವಿವಿಧ ಕಾರಣಗಳಿಗೆ ಬಾಕಿಯಾಗಿದೆ. ಅದರಲ್ಲೂ ಹಿಂದಿನ ವರ್ಷಗಳಲ್ಲಿ ಚಂಡಮಾರುತದ ಪ್ರಭಾವದಿಂದ ಉಂಟಾದ ಸಮುದ್ರ ಕೊರೆತಕ್ಕೆ ತುರ್ತು ನೆಲೆಯಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾದ ಪ್ರಸ್ತಾವಿತ ಕಾಮಗಾರಿಗೆ ಇನ್ನೂ ಅನುಮೋದನೆಯೇ ಸಿಕ್ಕಿಲ್ಲ.
    ‘ಓಖಿ’ ಚಂಡಮಾರುತದ (2018-19)ಪ್ರಭಾವದಿಂದ ಉಂಟಾದ ಸಮುದ್ರ ಕೊರೆತ ಸರಿಪಡಿಸಲು 13.57 ಕೋಟಿ ರೂ.ಗಳ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. 2019-20ರಲ್ಲಿ ‘ಕ್ಯಾರ್’ ಹಾಗೂ ‘ಮಹಾ’ ಚಂಡಮಾರುತದ ಪರಿಣಾಮದಿಂದ ಉಂಟಾದ ಸಮುದ್ರ ಕೊರೆತ ಸರಿಪಡಿಸಲು 6.09 ಕೋಟಿ ರೂ.ಗಳ ಪ್ರಸ್ತಾವ ಸಲ್ಲಿಸಲಾಗಿತ್ತು. 2020-21ರಲ್ಲಿ ಮಳೆಗಾಲದ ಸಮುದ್ರ ಕೊರೆತ ಸರಿಪಡಿಸಲು 1.88 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. 2020-21ರಲ್ಲಿ ‘ತೌಕ್ತೆ’ ಚಂಡಮಾರುತದ ಪ್ರಭಾವದಿಂದ ಸಮುದ್ರ ಕೊರೆತ ಆಗಿರುವುದನ್ನು ಸರಿ ಮಾಡಲು 2 ಕೋಟಿ ರೂ.ಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಇದ್ಯಾವುದಕ್ಕೂ ಅನುಮೋದನೆಯೇ ಆಗಿಲ್ಲ. (

    ಈ ಬಾರಿ 3 ಕೋಟಿ ರೂ.ನಿರೀಕ್ಷೆ
    ಈ (2023) ಸಾಲಿನ ಮಳೆಗಾಲಕ್ಕೆ ಗುರುತಿಸಿದ ಇತರ ಸಂಭಾವ್ಯ ಸಮುದ್ರ ಕೊರೆತ ಪ್ರದೇಶ ಹಾಗೂ ಅಲ್ಲಿ ತುರ್ತು ನೆಲೆಯಲ್ಲಿ ಅವಶ್ಯ ಕೆಲಸಗಳಿಗಾಗಿ 3 ಕೋಟಿ ರೂ.ಗಳ ಪ್ರಸ್ತಾವನೆಯೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ ದಕ್ಷಿಣ ಕನ್ನಡ-ಉಡುಪಿ ಪ್ರವಾಸದ ವೇಳೆ ಸಮುದ್ರ ಕೊರೆತ ಹಾನಿಯನ್ನು ನೋಡಿದ್ದಾರೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಸೋಮೇಶ್ವರ-ಬಟ್ಟಪ್ಪಾಡಿ, ಉಳ್ಳಾಲ ಸೀ ಗ್ರೌಂಡ್ ಪ್ರದೇಶಕ್ಕೆ 1.50 ಕೋಟಿ ರೂ., ಮಂಗಳೂರು ನಗರ ಉತ್ತರದ ಸುರತ್ಕಲ್ ಲೈಟ್‌ಹೌಸ್ ಹಾಗೂ ಮುಕ್ಕ ಪ್ರದೇಶಕ್ಕೆ 1 ಕೋಟಿ ರೂ, ಮೂಡುಬಿದಿರೆ ಕ್ಷೇತ್ರದ ಸಸಿಹಿತ್ಲು ಪ್ರದೇಶಕ್ಕೆ 50 ಲಕ್ಷ ರೂ.ಗಳ ಪ್ರಸ್ತಾವನೆ ಈ ಬಾರಿ ಸರ್ಕಾರಕ್ಕೆ ಹೊಸದಾಗಿ ಸಲ್ಲಿಕೆಯಾಗಿವೆ. ((ಬಾಕ್ಸ್))

    ಕೆಲವು ಕಾಮಗಾರಿಗೆ ಅಸ್ತು
    ಈ ಮಧ್ಯೆ, ಈ ಹಿಂದಿನ ಚಂಡಮಾರುತದಿಂದ ಬಹುವಾಗಿ ಹಾನಿಗೊಳಗಾಗಿ ಜನರಿಗೆ ಸಮಸ್ಯೆ ಆಗುತ್ತಿದ್ದ ಆಯ್ದ ತುರ್ತು ಕಾಮಗಾರಿಗಳನ್ನು ಜಿಲ್ಲೆಯ ಕೆಲವು ಕಡೆ ನಡೆಸಲಾಗಿದೆ. ಅದರಂತೆ, ಸುರತ್ಕಲ್‌ನ ಲೈಟ್‌ಹೌಸ್ ಬೀಚ್ ರಸ್ತೆ ಕಳೆದ ‘ತೌಕ್ತೆ’ ಚಂಡಮಾರುತದಿಂದ ಸಮುದ್ರ ಕೊರೆತಕ್ಕೀಡಾಗಿ ಕೊಚ್ಚಿ ಹೋದ ಬಳಿಕ ಬಹುತೇಕ ಸಂಪರ್ಕ ಕಳೆದುಕೊಂಡಿತ್ತು. ಇದೀಗ ಅಲ್ಲಿ ಡಾಂಬರು ಹಾಕಿ, ವಾಹನ ಓಡಾಟ, ವಾಕಿಂಗ್‌ಗೆ ಅನುಕೂಲ ಕಲ್ಪಿಸಲಾಗಿದೆ. ಇಂಥ ಕೆಲವು ಕಾಮಗಾರಿ ಮಾತ್ರ ಈಗ ನಡೆದಿದೆ. ((ಬಾಕ್ಸ್)) ದಕ್ಷಿಣ ಕನ್ನಡ ಜಿಲ್ಲೆಯ ಸಂಭಾವ್ಯ ಸಮುದ್ರ

    ಕೊರೆತ ಬಾಧಿತ ಪ್ರದೇಶಗಳು

    1. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಬಟ್ಟಪ್ಪಾಡಿ
    2. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಉಚ್ಚಿಲ
    3. ಉಳ್ಳಾಲ ನಗರಸಭಾ ವ್ಯಾಪ್ತಿಯ ಸೀ ಗ್ರೌಂಡ್
    4. ಉಳ್ಳಾಲ ನಗರಸಭಾ ವ್ಯಾಪ್ತಿಯ ಮೊಗವೀರಪಟ್ಣ
    5. ಮನಪಾ ವ್ಯಾಪ್ತಿಯ ಮೀನಕಳಿಯ
    6. ಮನಪಾ ವ್ಯಾಪ್ತಿಯ ಸುರತ್ಕಲ್ ಲೈಟ್‌ಹೌಸ್ ಬಳಿ
    7. ಮನಪಾ ವ್ಯಾಪ್ತಿಯ ಮುಕ್ಕ
    8. ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಸಸಿಹಿತ್ಲು

      ಸಮುದ್ರ ಕೊರೆತ ತಡೆ ಕಾಮಗಾರಿಯ ಪ್ರಸ್ತಾವಿತ ಕೆಲವು ಯೋಜನೆಗೆ ಶೀಘ್ರ ಅನುಮೋದನೆ ನೀಡಲು ಸೂಚನೆ ನೀಡಲಾಗಿದೆ. ಸುರತ್ಕಲ್ ಲೈಟ್‌ಹೌಸ್, ಉಚ್ಚಿಲ, ಬಟ್ಟಪ್ಪಾಡಿ ಹಾಗೂ ಮೀನಕಳಿಯದಲ್ಲಿ 2022-23ನೇ ಸಾಲಿನ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಅನುಮೋದನೆಯಾದ ಯೋಜನೆಯನ್ನು ತಕ್ಷಣ ಆರಂಭಿಸಲು ಸೂಚಿಸಲಾಗಿದೆ.
      ಮಂಕಾಳ ವೈದ್ಯ, ಸಚಿವರು, ಮೀನುಗಾರಿಕೆ ಮತ್ತು ಬಂದರು ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts